ಹೋಮ್ ಕ್ವಾರಂಟೈಮ್‌ನಲ್ಲಿರಲು ತಹಸೀಲ್ದಾರ ಖಡಕ್ ಸೂಚನೆ

0
62

ಶಹಾಬಾದ: ತಾಲೂಕಿನಲ್ಲಿ ಸುಮಾರು ಆರುನೂರಕ್ಕೂ ಹೆಚ್ಚು ಜನರು ವಿವಿಧ ಪಟ್ಟಣಗಳಿಂದ ಬಂದಿದ್ದು, ಅವರನ್ನು ಗುರುತಿಸಿ, ಹೋಮ್ ಕ್ವಾರಂಟೈಮ್‌ನಲ್ಲಿಡಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.

ಈಗಾಗಲೇ ವಿದೇಶದಿಂದ ಸುಮಾರು ೧೪ ಜನರು ಬಂದಿದ್ದು, ಅವರನ್ನು ಕಟ್ಟುನಿಟ್ಟಾಗಿ ಹೋಮ್ ಕ್ವಾರಂಟೈಮ್‌ನಲ್ಲಿ ಇಡಲಾಗಿದೆ.ಅಲ್ಲದೇ ಮುಂಬಯಿ, ಹೈದ್ರಬಾದ, ಬೆಂಗಳೂರಿ, ಕೇರಳ, ತಮಿಳುನಾಡುದಿಂದಲೂ ಜನರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಶಹಾಬಾದ ನಗರದಲ್ಲಿ ೨೬, ಹೊನಗುಂಟಾ ಗ್ರಾಮದಲ್ಲಿ ೭೮,ಮರತೂರ ಗ್ರಾಮದಲ್ಲಿ೩೯, ಮುತ್ತಗಾದಲ್ಲಿ ೨೯, ಭಂಕೂರದಲ್ಲಿ ೬೦,ಅಲ್ದಿಹಾಳ ೮, ದೇವನತೆಗನೂರ ೨೫೭,ತರನಳ್ಳಿ ೧೯, ತೊನಸನಹಳ್ಳಿ (ಎಸ್) ೬೮,ಗೋಳಾ (ಕೆ)ದಲ್ಲಿ ೯, ಕಡಿಹಳ್ಳಿಯಲ್ಲಿ ೧೮ ಜನರು ಸೇರಿದಂತೆ ಸುಮಾರು ೬೧೧ ಜನರನ್ನು ಗುರುತಿಸಲಾಗಿದೆ. ಇವರನ್ನು ಆಯಾ ಗ್ರಾಮದ ಗ್ರಾಮಲೆಕ್ಕಿಗರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತ, ಗ್ರಾಪಂ ಸಿಬ್ಬಂದಿಗಳು ನಿಗಾವಹಿಸಲು ನಿಯೋಜಿಸಲಾಗಿದೆ.ಅವರನ್ನು ಕಟ್ಟುನಿಟ್ಟಾಗಿ ಹೋಮ್ ಕ್ವಾರಂಟೈಮ್‌ನಲ್ಲಿ ಇರಲು ಆದೇಶಿಸಲಾಗಿದೆ.ಅಲ್ಲದೇ ಯಾರ ಜತೆಗೂ ಸಂಪರ್ಕ ಹೊಂದಬಾರದು. ಒಂದು ವೇಳೆ ಆದೇಶವನ್ನು ಉಲ್ಲಂಘಿಸಿದರೇ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Contact Your\'s Advertisement; 9902492681

ತರಕಾರಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು. ಅದರ ಪರ್ಯಾಯವಾಗಿ ಕೈಬಂಡಿಗಳನ್ನು ಉಚಿತವಾಗಿ ನೀಡಲಾಗಿದ್ದು, ತರಕಾರಿಗಳನ್ನು ನಗರ ವ್ಯಾಪ್ತಿಯ ಬಡಾವಣೆಗಳಿಗೆ ಜನರ ಮನೆಮನೆಗೆ ತೆರಳಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಯಾರಿಗಾದರೂ ಆಹಾರ ಧಾನ್ಯಗಳ ಸಮಸ್ಯೆ, ಹಾಗೂ ಬಡ ಜನರಿಗೆ ಊಟದ ಸಮಸ್ಯೆ ಇದ್ದರೇ ನೇರವಾಗಿ ನನ್ನನ್ನು ಸಂಪರ್ಕಿಸಿ : ೮೬೬೦೮೩೨೧೮೦ ನಿಮಗೆ ಬೇಕಾದ ವ್ಯವಸ್ಥೆ ಮಾಡಿ ಕೊಡಲಾಗುವುದು.ಅದಕ್ಕೆ ಯಾವುದೇ ರೀತಿಯ ಹಿಂಜರಿಕೆ ಹಾಗೂ ಸಂಕೋಚ ಪಡಬೇಡಿ. ಸಾರ್ವಜನಿಕರು ಆದಷ್ಟು ಮಾಸ್ಕ್ ಬಳಸಿ.ಅನಾವಶ್ಯಕವಾಗಿ ಮನೆಯಿಂದ ಹೊರಬರಬೇಡಿ. ಅಲ್ಲದೇ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here