ಬಾದ್ಯಾಪುರ ಗ್ರಾಮದ ಗುಳೆ ಹೋಗಿ ಬಂದವರಲ್ಲಿ ಕೊರೊನಾ ತಪಸಣೆ

0
89

ಸುರಪುರ: ಕರೊನಾ ಎಂಬ ಮಹಾಮಾರಿಯು ಇಡಿ ಜಗತ್ತನೆ ತಲ್ಲಣಗೊಳಿಸುತ್ತಿದೆ ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಸರ್ಕಾರ ವಿಧಿಸಿರುವ ಈ ಲಾಕಡೌನ ಅನ್ನು ನಾವುಗಳು ಅನುಸರಿಸಬೇಕಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಧರ್ಮರಾಜ ಬಡಗೇರ ಹೇಳಿದರು.

ತಾಲೂಕಿನ ಬಾದ್ಯಾಪೂರ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ತಪಾಸಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈ ಸೊಂಕಿನ ಕುರಿತು ಯಾರು ಭಯಪಡುವುದು ಬೇಡಾ ಸೊಂಕುತಗುಲಿದ್ದರು ವೈದ್ಯರು ಹೇಳಿದಂತೆ ಚಿಕಿತ್ಸೆಪಡೆದುಕೊಂಡರೆ ಗುಣಮುಖರಾಗಬಹುದು.
ಇದರ ಬಗ್ಗೆ ಹೆಚ್ಚು ಮುಂಜಾಗೃತೆ ವಹಿಸಬೇಕಾದ ಅವಶ್ಯಕತೆ ಇದೆ ಮತ್ತು ದೇಶದ ಮತ್ತು ರಾಜ್ಯ ವಿವಿಧ ಬಾಗಗಳಿಗೆ ದುಡಿಮೆಗೆ ತೆರಳಿದ ಜನರು ಮರಳಿ ಗ್ರಾಮಕ್ಕೆ ಬಂದಿದ್ದಾರೆ ಮೂದಲು ಭಯಪಡುವುದನ್ನು ಬಿಟ್ಟು ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ೧೪ ದಿನಗಳ ಕಾಲ ಮನೆಯಲ್ಲಿ ಇರುವುದು ಒಳಿತು ಎಂದು ತಿಳಿಸಿದರು.

Contact Your\'s Advertisement; 9902492681

ನಂತರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸತೀಶ ಅಲಗೂರು ಮಾತನಾಡಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಈ ಕುರಿತು ಜಾಗೃತಿ ಮೂಡಿಸಲಾಗಿದೆ ಜನರು ಸಾಮಾಜಿಕ ಅಂತರಕಾಯ್ದುಕೊಂಡು ಅನಾವಶ್ಯಕವಾಗಿ ಹೊರಗಡೆ ತಿರುಗಾಡದೆ ಮನೆಯಲ್ಲಿಯ ಇರುಬೇಕು ಮತ್ತು ಹೊರ ಊರಿನಿಂದ ಗ್ರಾಮಕ್ಕೆ ಬಂದವರು ಹಾಗೂ ಗ್ರಾಮಸ್ಥರಿಗೆ ಜ್ವರ, ನೆಗಡಿ, ಇತರನಾದ ಕಾಯಿಲೆಗಳು ಬಂದಲ್ಲಿ ನಿರ್ಲಕ್ಷಸಿದೆ ಮೂದಲು ವೈದ್ಯರನ್ನು ಸಂಪರ್ಕಿಸಿ ಈಗಾಗಲೆ ಹೊರ ಊರುಗಳಿಂದ ಬಂದ ೧೫೦ಕ್ಕೂ ಹೆಚ್ಚು ಜನರನ್ನು ತಪಾಸನೆಗೊಳ ಪಡಿಸಲಾಗಿದೆ ಎಂದು ತಿಳಿಸಿದರು.

ವೈದ್ಯರಾದ ಡಾ. ಬಸಿರಾಬಾನು, ಡಾ.ಅಲ್ಲಾವುದ್ದಿನ್, ಶಾಂತ ಮೂರ್ತಿ, ಮಲ್ಲು ಬಾದ್ಯಾಪುರ, ಬಸವರಾಜೇಶ್ವರಿ ಬಡಗೇರ, ಮರೆಮ್ಮ, ಬಸ್ಸಮ್ಮ, ಮಲ್ಲಮ್ಮ, ತಿರುಪತಿ, ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here