ಅಸ್ಸಾಂ ಶಾಪಿಂಗ್ ಮಾಲ್ ಹೊರಗಡೆ ಸ್ಫೋಟ: 6 ಮಂದಿ ಗಂಭೀರ ಗಾಯ

0
102

ಅಸ್ಸಾಂ: ಗೌಹಾಟಿಯಲ್ಲಿ ಶಾಪಿಂಗ್ ಮಾಲ್ ಹೊರಬಾಗದಲ್ಲಿ ಗ್ರೆನೇಟ್ ಸ್ಪೋಟಗೊಂಡ ಘಟನೆ ನಡೆದಿದ್ದು, ಘಟನೆಯಲ್ಲಿ 6 ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೌಹಾಟಿಯ ಝೂ ಎರಿಯಾ ಬಡಾವಣೆಯಲ್ಲಿರುವ ಶಾಪಿಂಗ್ ಮಾಲ್ ಹೊರಗಡೆ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದು, ಕೃತ್ಯದ ಕುರಿತು ಅಸ್ಸಾಂ ಮುಖ್ಯಮಂತ್ರಿ ಸರಬಂದಾ ಸೋನೋವಾಲ್ ಅವರು ಕೃತ್ಯವನ್ನು ಖಂಡಿಸಿ, ಗೌಹಾಟಿಯ ಡಿಜಿಪಿ ಕುಲಧರ ಸೈಕಿಯಾ ಅವರೊಂದಿಗೆ ಮಾತನಾಡಿ ಕೃತ್ಯದ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಸದ್ಯ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಸ್ಫೋಟದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here