ಕಲಬುರಗಿ: ಉತ್ತರ ಮತ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರು ಇಂದು ನಗರದ ಆಹಾರ ಇಲಾಖೆಯ ಪಡಿತರ ಆಹಾರ ಧಾನ್ಯ ಸರಬರಾಜು ಗೋದಾಮ್ ಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಮಯದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ನಿರೀಕ್ಷಕರೊಂದಿಗೆ ಮಾತನಾಡಿದ ಅವರು, ಆಹಾರ ಸಾಮಗ್ರಿಗಳು ಫಲಾನುಭವಿಗಳಿಗೆ ಪಡಿತರ ವಿತರಿಸಲು ವಿಳಂಬ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿದರು. ನಿಗಧಿತ ಸಮಯದ ಒಳಗೆ ಅಂಡಿಗಳಿಗೆ ಧಾನ್ಯ ತಲುಪಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅದೀಲ್ ಸೇಠ್ ಸುಲೇಮಾನಿ. ಯುವ ಮುಖಂಡರಾದ ಫರಾಜು-ಉಲ್- ಇಸ್ಲಾಂ ಸೇರಿದಂತೆ ಗೋದಾಮ್ ಕಾರ್ಮಿಕರು ಮತ್ತು ಅಧಿಕಾರಿಗಳು ಇದ್ದರು.