ಕೊರೋನಾ ಭೀತಿ: ಸೇವಾ ಕಾರ್ಯಕರ್ತರಿಗೆ ಗುಣಮಟ್ಟದ ಮಾಸ್ಕ್‌ಗಳ ವಿತರಣೆ

0
24

ಕಲಬುರಗಿ: ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಸೇವಾ ಕಾರ್ಯಕರ್ತರಿಗೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಪಾಟೀಲ್ ರಾಯಕೋಡ್ ಮತ್ತು ಸಮಾಜ ಸೇವಕ ಪೃಥ್ವಿ ಅವರು ವಿನೂತನ ರೀತಿಯ ಗುಣಮಟ್ಟದ ಮಾಸ್ಕ್‌ಗಳನ್ನು (ಫೇಸ್ ಶೀಲ್ಡ್) ಗುರುವಾರ ವಿತರಿಸಿದರು.

ಮಹಾಮಾರಿ ಕೊರೋನಾ ವಿರುದ್ಧ ತಮ್ಮ ಪ್ರಾಣ ಒತ್ತೆ ಇಟ್ಟು ಹೋರಾಡುತ್ತಿರುವ ಪೋಲಿಸರು, ವೈದ್ಯರು ಹಾಗೂ ಪೌರ ಕಾರ್ಮಿಕರಿಗೆ ಗುಣಮಟ್ಟದ ಮಾಸ್ಕ್‌ಗಳನ್ನು ವಿತರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಡಾ. ಬಸವರಾಜ್ ಪಾಟೀಲ್ ರಾಯಕೋಡ್ ಅವರು ಮಾತನಾಡಿ, ಈಗಾಗಲೇ ೧೦೦ ಮುಖ ಕವಚಗಳನ್ನು ತಯಾರಿಸಲಾಗಿದೆ. ಒಂದು ಮುಖ ಕವಚಕ್ಕೆ ೧೦೦ರೂ.ಗಳು ವೆಚ್ಚ ಆಗುತ್ತಿದ್ದು, ದಿನಕ್ಕೆ ೪೦ ಮಾಸ್ಕ್‌ಗಳನ್ನು ತಯಾರಿಸಲಾಗುತ್ತಿದೆ. ತಯಾರಿಸಲಾದ ಮಾಸ್ಕ್‌ಗಳಲ್ಲಿ ಬಸವೇಶ್ವರ್ ಆಸ್ಪತ್ರೆಗೆ ೪೦ ಹಾಗೂ ಪೋಲಿಸ್ ಇಲಾಖೆಗೆ ೫೦ ಮಾಕ್‌ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರಿಗೂ ಮಾಸ್ಕ್‌ಗಳನ್ನು ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರ ಪೋಲಿಸ್ ಆಯುಕ್ತ ಎನ್. ಸತೀಶಕುಮಾರ್ ಅವರು ಉಪಸ್ಥಿತರಿದ್ದು, ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊರೋನಾ ಸೋಂಕು ನಿರ್ಮೂಲನೆಯಾಗುವವರೆಗೂ ಜಾಗೃತಿ ಮೂಡಿಸಲಾಗುವುದು ಎಂದು ವೀರೇಂದ್ರ ಪಾಟೀಲ್ ರಾಯಕೋಡ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here