ಕೊರೊನಾ ಹೆಸರಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ: ಹಳಕರ್ಟಿ ದರ್ಗಾದ ಸಜ್ಜಾದ್ ನಶೀನ್

0
56

ವಾಡಿ: ವ್ಯಾಪಿಸುತ್ತಿರುವ ಕೊರೊನಾ ವೈರಸ್ ಹೆಸರಿನಲ್ಲಿ ಕೋಮು ಸೌಹಾರ್ಧತೆ ಕದಡುವ ಲಕ್ಷಣಗಳು ಕಾಣುತ್ತಿವೆ. ದೇಶದ ಜನರು ಜೀವ ಭಯದಲ್ಲಿರುವಾಗ ಪರಸ್ಪರ ಪ್ರೀತಿ, ಸ್ನೇಹ, ಸಹಾಯ, ಸಹಕಾರ ಭಾವದಿಂದ ನಡೆದುಕೊಳ್ಳುವುದೇ ನಿಜವಾದ ಧರ್ಮ ಎಂದು ಹಳಕರ್ಟಿ ದರ್ಗಾದ ಸಜ್ಜಾದ್ ನಶೀನ್ ಹಜರತ್ ಸೈಯ್ಯದ್ ಅಬುತುರಾಬ ಶಾಹ ಖಾದ್ರಿ ಹೇಳಿದರು.

ಈ ಭಾಗದ ಹಿಂದು-ಮುಸ್ಲಿಂ ಭಕ್ತರ ಆರಾಧ್ಯ ದೈವ ಹಳಕರ್ಟಿಯ ಹಜರತ್ ಖ್ವಾಜಾ ಸೈಯ್ಯದ್ ಮಹ್ಮದ್ ಬಾದಶಾಹ ದರ್ಗಾ ಆವರಣದಲ್ಲಿ ಸುಮಾರು ೨೦೦೦ ಬಡ ಕುಟುಂಬಗಳಿಗೆ ತಲಾ ೫ ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದರ್ಗಾ ಸಾಹೇಬ ಅಬುತುರಾಬ ಶಾಹ, ರೋಗ ಎಂಬುದು ಹಿಂದು-ಮುಸ್ಲೀಮ, ಬಡವ-ಶ್ರೀಮಂತ ಎಂದು ಅಪ್ಪಿಕೊಳ್ಳುವುದಿಲ್ಲ. ಪ್ರಾಕೃತಿಕವಾಗಿ ಅದು ವ್ಯಾಪಿಸುತ್ತದೆ. ಕೈಗಳ ಸ್ವಚ್ಚತೆ ಮತ್ತು ಸಾಮಾಜಿಕ ಅಂತರ ಪಾಲನೆಯಿಂದ ಇದನ್ನು ನಿಯಂತ್ರಿಸಬಹುದು.

Contact Your\'s Advertisement; 9902492681

ದೆಹಲಿಯ ನಿಜಾಮೋದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಸರಕಾರಕ್ಕೆ ಶರಣಾಗಬೇಕಿತ್ತು. ಈ ಧಾರ್ಮಿಕ ಸಭೆಯನ್ನೇ ಕೆಲವರು ಅನುಮಾನದಿಂದ ಕಾಣುವುದು ಸರಿಯಲ್ಲ. ಕೊರೊನಾ ವಿಶ್ವವನ್ನೇ ಕಾಡುತ್ತಿದೆ. ಅಲ್ಲಿಯೂ ವೈಸರ್ ಹರಡಲು ಇದೇ ಧರ್ಮಿಯರು ಕಾರಣನಾ? ಎಂದು ಪ್ರಶ್ನಿಸಿದ ಸಾಹೇಬ, ನಾವೆಲ್ಲರೂ ಅಣ್ಣ ತಮ್ಮಂದಿರಾಗಿ ಒಗ್ಗಟ್ಟಿನಿಂದ ಕೊರೊನಾ ಓಡಿಸಲು ಮುಂದಾಗಬೇಕು. ಸಂಘ ಸಂಸ್ಥೆಗಳು ಮತ್ತು ಮಠ ಮಾನ್ಯಗಳಿಂದ ಹಸಿದವರ ಒಡಲಿಗೆ ಅನ್ನ ಹಾಕುವ ಕೆಲಸ ನಡೆಯುತ್ತಿದೆ. ಸರಕಾರವೂ ಕೂಡ ಯುದ್ಯೋಪಾದಿಯಲ್ಲಿ ನಿರ್ಗತಿಕರ ಮತ್ತು ದಿನಗೂಲಿಗಳ ನೆರವಿಗೆ ಧಾವಿಸಬೇಕು ಎಂದರು.

ಹಳಕರ್ಟಿ ಗ್ರಾಮದ ಹಿರಿಯ ಮುಖಂಡ ಮಲ್ಲಣ್ಣಸಾಹು ಸಂಗಶೆಟ್ಟಿ, ದರ್ಗಾದ ಹಾಫೀಜ್ ಗುಲಾಮನಬಿ, ಮೌಲಾನಾ ಜಹೀರ್, ರಿಯಾಜೋದ್ದಿನ್ ಖಾದ್ರಿ, ಅಬ್ದುಲ್ ಅಲೀಮಖಾದ್ರಿ, ಇಕ್ಬಾಲ್ ಖಾದ್ರಿ, ಇಮಾಮಸಾಬ್ ಪಾಲ್ಗೊಂಡಿದ್ದರು. ಹಳಕರ್ಟಿ ಗ್ರಾಮ ಸೇರಿದಂತೆ ಇತರ ಗ್ರಾಮ ಮತ್ತು ತಾಂಡಾಗಳ ಬಡ ಜನರು ಸಾಮಾಜಿಕ ಅಂತರದಲ್ಲಿ ನಿಂತು ಅಕ್ಕಿ ದಾಸ್ತಾನು ಸ್ವೀಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here