ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 1129ನೇ ಜಯಂತೋತ್ಸವವನ್ನು ಸಾರ್ವಜನಿಕವಾಗಿ ಆಚರಿಸದೇ ನಮ್ಮ ನಮ್ಮ ಮನೆಗಳಲ್ಲಿಯೇ ಜ್ಞಾನದ ಸೂರ್ಯನಿಗೆ ಗೌರವನ್ನು ಸಲ್ಲಿಸೋಣ ಎಂದು ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ ಔರಾದಕರ್ ತಿಳಿಸಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವು ಕೂಡ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಸಾರ್ವಜನಿಕವಾಗಿ ಬಹಿರಂಗ ವೇದಿಕೆ ನಿರ್ಮಾಣ ಮಾಡಿ ಲಕ್ಷಾಂತರ ಜನರನ್ನು ಸೇರಿಸಿ ವರ್ಣರಂಜಿತ ಮತ್ತು ವಿಚಾರ ಸಂಕಿರ್ಣ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವು ಜಿಲ್ಲಾ ಜಯಂತೋತ್ಸವ ಸಮಿತಿಯು ಅದ್ದೂರಿಯಾಗಿ ಮಾಡಿಕೊಂಡಿತ್ತು.
ಆದರೆ ಭಾರತ ದೇಶಕ್ಕೆ ಮತ್ತು ಕಲಬುರಗಿ ಜಿಲ್ಲೆಗೆ ಆವರಿಸಿದ ಕೋರೊನಾ ಎಂಬ ಮಹಾಮಾರಿ ರೋಗವು ಇಡೀ ಮನುಕುಲವನ್ನು ನಿಬ್ಬೇರಗಾಗುವಂತೆ ಮಾಡಿದೆ. ಭಾರತ ದೇಶದ ಜನಮನದ ಒಳಿತನ್ನೆ ಬಯಸಿದ ಡಾ. ಬಿ.ಆರ್. ಅಂಬೇಡ್ಕರ್ ರವರ 129ನೇ ಯ ಜಯಂತಿಯ ಈ ಸಂದರ್ಭದಲ್ಲಿ ನಾವೆಲ್ಲರೂ ಕೂಡ ಬಾಬಾಸಾಹೆಬರ ಆಶಯದಂತೆ ಕಾನೂನನ್ನು ಸದಾ ಗೌರವಿಸಿದ್ದೇವೆ. ಅದರಂತೆ ಈ ಭಾರಿಯ ಜಯಂತಿಯು ಜಿಲ್ಲಾಡಳಿತ ಕೈಗೊಂಡ ಕ್ರಮವನ್ನು ನಾವೆಲ್ಲರೂ ಸ್ವಾಗತಿಸಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜ್ಞಾನದ ಸೂರ್ಯ ಡಾ. ಬಿ.ಆರ್. ಅಂಬೇಡ್ಕರ್‍ರವರಿಗೆ ಗೌರವವನ್ನು ಎಂದಿನಂತೆ ಈ ವರ್ಷವು ನಡೆಯಲಾವುದು.
ಆದರೆ ಸಾರ್ವಜನಿಕವಾಗಿ ಆಚರಿಸದೇ ಜಿಲ್ಲೆಯ ಜನರ ಹಿತಕ್ಕಾಗಿ ಈ ಬಾರಿಯು ಜಯಂತಿಯನ್ನು ನಮ್ಮ ನಮ್ಮ ಮನೆಗಳಲ್ಲಿ ವಿಶ್ವಜ್ಞಾನಿ, ಭಾರತ ರತ್ನ, ಸಂವಿಧಾನ ಶಿಲ್ಪಿಗೆ ಗೌರವವನ್ನು ಸಲ್ಲಿಸುವ ಮೂಲಕ ಅವರ ಜಯಂತಿಯನ್ನು ಆಚರಣೆ ಮಾಡೋಣ ಎಂದು ಜಿಲ್ಲೆಯ ಸಮಸ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳಲ್ಲಿ ಜಿಲ್ಲಾ ಜಯಂತ್ಯೋತ್ಸವ ಸಮಿತಿಯು ಮನವಿ ಮಾಡಿಕೊಳ್ಳುತ್ತದೆ ಎಂದು ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ ಔರಾದಕರ್ ಅವರು ಪತ್ರಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.