ಕಲಬುರಗಿ: ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರಧಾನಮಂತ್ರಿ ಜನಧನ್ ಯೋಜನೆಯ ಮಹಿಳಾ ಖಾತೆಗಳಿಗೆ ನೀಡುತ್ತಿರುವ ಮಾಹೆಯಾನ 500 ರೂ. ಹಣವನ್ನು ಸರ್ಕಾರ ಹಿಂತೆಗೆಕೊಳ್ಳುವುದಿಲ್ಲ. ಹೀಗಾಗಿ ಗ್ರಾಹಕರು ಆತಂಕಪಡಬೇಕಿಲ್ಲ ಎಂದು ಕಲಬುರಗಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸಿ.ಹೆಚ್. ಹವಾಲ್ದಾರ್ ಸ್ಪಷ್ಟಪಡಿಸಿದ್ದಾರೆ.
ಗರೀಬ್ ಕಲ್ಯಾಣ್ ಯೋಜನೆಯಡಿ ಜಮಾ ಮಾಡಿರುವ ಹಣವನ್ನು ವಾಪಸ್ ತೆಗೆದುಕೊಳ್ಳುತ್ತದೆ ಎಂಬ ತಪ್ಪು ಭಾವನೆಯಲ್ಲಿ ಗ್ರಾಹಕರು ಬ್ಯಾಂಕ್‍ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ವಿμÁದ ವ್ಯಕ್ತಪಡಿಸಿದ್ಧಾರೆ.
ಸರ್ಕಾರದಿಂದ ಒಮ್ಮೆ ಜಮಾ ಮಾಡಿದ ಮೊತ್ತವನ್ನು ಯಾವುದೇ ಕಾರಣಕ್ಕೂ ವಾಪಸ್ ತೆಗೆದುಕೊಳ್ಳುವುದಿಲ್ಲ. ಕೇಂದ್ರ ಸರ್ಕಾರವು 2020ರ ಮಾರ್ಚ್, ಏಪ್ರಿಲ್ ಮತ್ತು ಮೇ ಮಾಹೆಗೆ ಪ್ರತಿ ತಿಂಗಳು 500 ರೂ. ಗಳನ್ನು ಪ್ರಧಾನಮಂತ್ರಿ ಜನಧನ್ ಯೋಜನೆಯ ಮಹಿಳಾ ಖಾತೆಗಳಿಗೆ ವರ್ಗಾಯಿಸುತ್ತಿದೆ.
ಜಿಲ್ಲೆಯಲ್ಲಿ ಸುಮಾರು 2,21,000 ಅರ್ಹ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ. ಗ್ರಾಹಕರು ಆಯಾ ತಿಂಗಳ ಯಾವ ದಿನವಾದರೂ ಅಥವಾ 3 ತಿಂಗಳ ನಂತರ ಒಟ್ಟಿಗೆ 1500 ರೂ. ಗಳು ಪಡೆಯಬಹುದು ಎಂದು ಸಿ.ಹೆಚ್.ಹವಾಲ್ದಾರ್ ತಿಳಿಸಿದ್ದಾರೆ.
ಪ್ರತಿ ತಿಂಗಳು 500 ರೂ. ಪಡೆಯಲು ಎಲ್ಲಾ 2,21,000 ಗ್ರಾಹಕರು ಬ್ಯಾಂಕುಗಳಿಗೆ ಭೇಟಿ ನೀಡಿ ಜನಸಂದಣಿ ಸೃಷ್ಠಿಸಿದಲ್ಲಿ ಕೊರೋನಾ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯ ಲಾಕ್ ಡೌನ್ ಉಲ್ಲಂಘನೆ ಮಾಡಿದಂತಾಗುತ್ತದೆ. ಆದ್ದರಿಂದ ಗ್ರಾಹಕರು ಅಗತ್ಯವಿದ್ದಲ್ಲಿ ಮಾತ್ರ ಬ್ಯಾಂಕುಗಳಿಗೆ ಖಾತೆದಾರರು ಭೇಟಿ ನೀಡಬೇಕು ಮತ್ತು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.