ಡಾ. ಅಂಬೇಡ್ಕರ್ ತತ್ವ,ಸಿದ್ದಾಂತ, ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಿ: ಮಾಲಿಕಯ್ಯ ಗುತ್ತೇದಾರ

0
67

ಕಲಬುರಗಿ: ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ತತ್ವ,ಸಿದ್ದಾಂತ ಹಾಗೂ ಅವರ ಆದರ್ಶಗಳನ್ನು ಜನರು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕರಾದ  ಮಾಲಿಕಯ್ಯ ಗುತ್ತೇದಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನಗರದ  ಜಗತ್ ವೃತದಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 129ನೇ ಜಯಂತೋತ್ಸವದ ಅಂಗವಾಗಿ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು  ಸಮಾಜದಲ್ಲಿ ಕಟ್ಟ ಕಡೆಯ ಮನುಷ್ಯ ಮುಖ್ಯವಾಹಿನಿಗೆ ಬರಬೆಕಾದರೆ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ,ಆದ್ದರಿಂದ  ಪ್ರತಿಯೊಬ್ಬರೂ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಅದರಿಂದ  ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕೊರೋನಾ ಮಹಾಮಾರಿಯನ್ನು ತೋಲಗಿಸಲು ಸಂಕಲ್ಪ ಮಾಡುವ ಜೋತೆಗೆ ದೇಶವನ್ನು ಆಪತ್ತಿನಂದ ಪಾರು ಮಾಡಬೇಕಾಗೆದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು,ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ, ಯುವ ಬಿಜೆಪಿ ಮುಖಂಡರಾದ ಶಿವಾ ಅಷ್ಠಗಿ, ವಿನೋದ ಬೋಮ್ಮಾ ಶಾಂತವೀರ ಬಡಿಗೇರ,ರಮೇಶ್ ಹುಲಿಮನಿ,ಜೀನೆಶ ಜ್ಯೋತಿ ಡಾ  ಭೀಮಾಶಂಕರ್ ಸಾಗರ್   ಸೇರಿದಂತೆ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here