ಕಲಬುರಗಿ: ಕೊರೊನಾ ವೈರಸ್ ಸಂಕಷ್ಟದ ದಿನಗಳಲ್ಲಿ ತಮ್ಮ ಜೀವ ಪಣ್ಣಕ್ಕಿಟ್ಟು ನಗರದ ಸ್ವಚ್ಛತೆ ಸೇರಿದಂತೆ ಹಲವಾರು ಕಾರ್ಯ ಕೈಗೆತ್ತಿಕೊಳ್ಳುತ್ತಿರುವ 96 ಪೌರ ಕಾರ್ಮಿಕರಿಗೆ ಮೊಹಲ್ಲಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಅಜಗರ್ ಚುಲಬುಲ್ ಅವರಿಂದ ಪೌರ ಕಾರ್ಮಿಕರಿಗೆ ಶಾಲ್ ಹೊದಿಸಿವ ಮೂಲಕ ಗೌರವಿ ಸನ್ಮಾನಿಸಲಾಯಿತು.
ಈ ವೇಳೆಯಲ್ಲಿ ಕಾರ್ಮಿಕರಿಗೆ ತರಕಾರಿ ಕಿಟ್ ವಿತರಿಸಿ, ಸರಕಾರ ಕೊರೊನಾ ವೈರಸ್ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದರು.
ಮಾಜಿ ಕಾರ್ಪೂರೇಟರ್ ಅಬ್ದುಲ್ ಅಜೀಂಗೊಲಕುಂಡಿ , ಮೌಲಾನಾ ನೂಹ , ಅಬ್ದುಲ್ ರಹಿಂ ಮಿರ್ಚಿ, ನ್ಯಾಯವಾದಿ ಕಲಿಂ ಉಸ್ಮಾನ ಅಲಿ ಗುತ್ತೇದಾರ ಸೇರಿದಂತೆ ಮುಂತಾದವರು ಇದ್ದರು.