ಮಾಂಗವಾಡ ಬಡಾವಣೆ ಕುಟುಂಬಗಳಿಗೆ ಅಕ್ಕಿ ಜೋಳ ವಿತರಣೆ

0
25

ಆಳಂದ: ಕೊರೊನಾ ವೈರಸ್ ಹಡದಂತೆ ಮುಂಜಾಗೃತ ಕ್ರಮವಾಗಿ ಕೈಗೊಳ್ಳಲಾದ ಲಾಕ್‍ಡೌನಿಂದಾಗಿ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿನ ಬಡ ಸಂತ್ರಸ್ತರಿಗೆ ಸಹಾಯಸ್ತ ನೀಡಲು ಧಾನಿಗಳು ಕಾರ್ಯ ಮುಂದುವರೆದಿದೆ.

ಪಟ್ಟಣದ ಮಾಂಗವಾಡ ಬಡಾವಣೆಯ ಕುಟುಂಬಗಳಿಗೆ ಶಂಕರಾವ್ ದೇಶಮುಖ ಅವರ ಮಕ್ಕಳಾದ ಸಂಜಯಕುಮಾರ ಮತ್ತು ಆನಂದ ದೇಶಮುಖ ಅವರು ತಹಸೀಲ್ದಾರ ದಯಾನಂದ ಪಾಟೀಲ ಸಮ್ಮುಖದಲ್ಲಿ ಎಲ್ಲಾ ಕುಟುಂಬಗಳಿಗೆ ಅಕ್ಕಿ ಮತ್ತು ಜೋಳವನ್ನು ವಿತರಿಸಿ ಮಾನವೀಯತೆ ಮೆರೆದರು.

Contact Your\'s Advertisement; 9902492681

ಈಗಾಗಲೇ ಹಲವು ಸಂಘ, ಸಂಸ್ಥೆಗಳು ತಕ್ಕ ಮಟ್ಟಿಗೆ ಸಹಾಯಸ್ತ ನೀಡಿದ್ದು, ಅಲ್ಲದೆ, 150 ನಿರ್ಗತಿಕ, ಬಡವರು, ಅಲೆಮಾರಿಗಳು ಹಾಗೂ ಗುಡಿಸಲುವಾಸಿಗಳ ಕುಟುಂಬಗಳಿಗೆ ತಾಲೂಕು ಆಡಳಿತದಿಂದ ಮೂರು ಹೊತ್ತಿನ ಊಟದ ವ್ಯವಸ್ಥೆ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾ, ಕ್ಯಾಥೊಲಿಕ ಚರ್ಚ್, ಮಾತೃಭೂಮಿ ಸೇವಾ ಸಂಸ್ಥೆ, ಹಳ್ಳಿಸಲಗರ ಗ್ರಾಮಸ್ಥರು, ಸ್ಥಳೀಯ ಕಿರಾಣಿ ವ್ಯಾಪಾರಿಗಳು, ಪುರಸಭೆ ಸದಸ್ಯರು, ಸಂತೋಷ ಹಾದಿಮನಿ, ಮಾದನಹಿಪ್ಪರ ಶಿವಲಿಂಗೇಶ್ವರ ಶ್ರೀಮಠ, ದಲಿತ ಸಂಘಟನೆ ಸೇರಿದಂತೆ ಹೀಗೆ ಅನೇಕ ದಾನಿಗಳಿಂದ ತಕ್ಕಮಟ್ಟಿನ ದಿನಸಿ ಸಾಮಗ್ರಿಗಳ ವಿತರಣೆ ಮಾಡಿಯಾದ್ದಾರೆ. ಸರ್ಕಾರದಿಂದ 11 ನೂರು ಕುಟುಂಬಗಳಿಗೆ ನಿತ್ಯ ಹಾಲು ಒದಗಿಸಲಾಗುತ್ತಿದೆ ಎಂದು ತಹಸೀಲ್ದಾರ ದಯಾನಂದ ಪಾಟೀಲ ಅವರು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಇಷ್ಟಾಗಿಯೂ ಇನ್ನೂ ಅನೇಕ ಬಡ ಮತ್ತು ಕೂಲಿ ಕಾರ್ಮಿಕರು ಪಟ್ಟಣದಲ್ಲಿದ್ದು ಅವರಿಗೆ ಸಹಾಯಸ್ತ ಕೈಗೊಳ್ಳಲು ಹೆಚ್ಚಿನ ದಾನಿಗಳು ಮುಂದಾಗಬೇಕು ಎಂದು ತಹಸೀಲ್ದಾರ ಅವರು ಜನತೆಗೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here