ಕಾರ್ಮಿಕರಿಗೆ ಇಲಾಖೆಯಿಂದ ಅಗತ್ಯ ಸೌಲಭ್ಯಕ್ಕೆ ಮೋದಿನ್ ಪಟೇಲ್ ಆಗ್ರಹ

0
86

ಕಲಬುರಗಿ: ನಗರದ ವಾರ್ಡ್ ಸಂಖ್ಯೆ 20 ರಲ್ಲಿ ಕಾರ್ಮಿಕರಿಗೆ ಮತ್ತು ಬಡ ನಿರ್ಗತಿಕರಿಗೆ ನಿರಾಶ್ರಿತರಿಗೆ ಮತ್ತು ಕಾರ್ಮಿಕರಿಗೆ ರೂ. 2000 ಮತ್ತು ದವಸಿ ಧಾನ್ಯಗಳು ಮತ್ತು ತಯಾರಿಸಿದ ಆಹಾರ ಸರಬರಾಜು ಮಾಡುವ ಕುರಿತು ನಯಾ ಸವೇರ ಸಂಘಟನೆ ವತಿಯಿಂದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಆಹಾರ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದವರು.

ಸಂಘಟನೆಯ ಮನವಿಗೆ ಸ್ಪಂದಿಸಿ ಇಂದು ನಗರದ ಮಿಸ್ಬಾ ನಗರ ಫಲಾನುಭವಿಗಳ ಮಾಹಿತಿ ಪರಿಶೀಲನೆಗೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕಾರ ಮನೋಹರ ದೌಲ ನೇತೃತ್ವದ ತಂಡ ಮಹಿತಿ ಪಡೆದು ಮಾತನಾಡಿ, ಕಾರ್ಮಿಕರ ಪಟ್ಟಿ ಇಲಾಖೆಗೆ ಸಲ್ಲಿಸಿದರೆ ಸಂಘಟನೆಯ ಬೇಡಿಕೆ ಪರಿಶೀಲಿಸಿ ಆದಷ್ಟು ಶೀಘ್ರ ಕ್ರಮ ಕೈಗೊಳುವುದಾಗಿ ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಯಾ ಸವೇರಾ ಸಂಘಟನೆಯ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ, ಪ್ರಧಾನ ಕಾರ್ಯದರ್ಶಿ ಸಲೀಮ್ ಚಿತಾಪುರಿ, ಸೈರಾ ಬಾನು ಜಿಲಾನ್ ಗುತ್ತೇದಾರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here