ಸುರಪುರ: ನಗರದಲ್ಲಿ ಕೊರೊನಾ ಸೊಂಕಿನ ಕುರಿತು ಸರಿಯಾದ ಜಾಗೃತಿ ಕಾರ್ಯಕ್ರಮ ನಡೆಯದೆ ಜನತೆ ಗೊಂದಲದಲ್ಲಿದ್ದಾರೆ,ಅಲ್ಲದೆ ಕೊರೊನಾ ಭೀತಿಯಿಂದ ಬಡ ಜನರು ಮನೆಯಿಂದ ಹೊರಗೆ ಬಾರದೆ ಇರುವುದರಿಂದ ಅವರಿಗೆ ದುಡಿಯಲು ಕೆಲಸವಿಲ್ಲದೆ ಜೀವನ ನಡೆಸಲು ತೊಂದರೆಯಾಗುತ್ತಿದೆ ಆದ್ದರಿಂದ ಜನರಿಗೆ ಅನುಕೂಲ ಕಲ್ಪಿಸಲು ಯೊಜನೆ ರೂಪಿಸಲು ಶಾಸಕ ನರಸಿಂಹ ನಾಯಕ (ರಾಜುಗೌಡ)ರು ತಮ್ಮ ನೇತೃತ್ವದಲ್ಲಿ ಸಭೆ ಕರೆಯಲು ನಗರಸಭೆಯ ವಾರ್ಡ್ ನಂಬರ್ 20ರ ಸದಸ್ಯೆ ಲಕ್ಷ್ಮೀ ಮಲ್ಲಿಕಾರ್ಜುನ ಬಿಲ್ಲವ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರಕಾರದಿಂದ ಕೇವಲ ಅಕ್ಕಿ ಗೋಧಿ ನೀಡಿದ ಮಾತ್ರಕ್ಕೆ ಜೀವನ ನಡೆಸಲಾಗದು.ಇನ್ನುಳಿದ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ಪಡೆಯಲು ಹಣವಿಲ್ಲದೆ ಜನತೆ ಪರದಾಡುವಂತಾಗಿದೆ.
ಅಲ್ಲದೆ ಕೊವಿಡ್-19 ಬಗ್ಗೆ ಜನರಲ್ಲಿ ಸರಿಯಾದ ಮಹಿತಿಯಿಲ್ಲ,ಇದರ ಬಗ್ಗೆ ನಗರಸಭೆಯಾಗಲಿ ತಾಲೂಕು ಆಡಳಿತವಾಗಲಿ ಸರಿಯಾದ ಜಾಗೃತಿಯನ್ನೂ ಮೂಡಿಸುತ್ತಿಲ್ಲ.ಆದ್ದರಿಂದ ತಮ್ಮ ನೇತೃತ್ವದಲ್ಲಿ ನಗರಸಭೆಯ ಅಧಿಕಾರಿಗಳು ಮತ್ತು ನಗರಸಭೆಯ ಸದಸ್ಯರ ಸಭೆಯನ್ನು ಕರೆದು ಕೊರೊನಾ ವೈರಸ್ ಜಾಗೃತಿ ಕಾರ್ಯಕ್ರಮ ರೂಪಿಸುವ ಬಗ್ಗೆ ಯೊಜನೆಯನ್ನು ಮಾಡಲು ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ.