ಕಲಬುರಗಿ: ವಿವಿ ವಸತಿ ನಿಲಯಗಳನ್ನು ಕ್ವಾರಂಟೈನ್ ಕೇಂದ್ರ ಮಾಡಿದ್ದಕ್ಕೆ ವಿರೋಧ

0
387

ಕಲಬುರಗಿ: ಕೊವಿಡ್-19 ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಸತಿ ನಿಲಯಗಳನ್ನು ತಾತ್ಕಾಲಿಕ ಕ್ವಾರಂಟೈನ್ ಸೇಂಟರ್ ಆಗಿ ಪರಿವರ್ತಿಸಿ ಡಿ.ಸಿ. ಶರತ್ ಬಿ. ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ತಕ್ಷಣವೇ ವಸತಿ ನಿಲಯಗಳನ್ನು ಜಿಲ್ಲಾ ಆರೋಗ್ಶ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಕುಲಸಚಿವರುಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Contact Your\'s Advertisement; 9902492681

ವಿದ್ಶಾರ್ಥಿಗಳ ವಿರೋಧ: ಗುಲಬರ್ಗಾ ವಿಶ್ವವಿದ್ಶಾಲಯಗಳನ್ನು ಕೊವಿಡ್-19 ಸಲುವಾಗಿ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಿದ್ದು ಸರಿಯಲ್ಲ. ಕೊರೊನಾ ಸಲುವಾಗಿ ಏಕಾಏಕಿ ಹಾಸ್ಟೇಲ್ ಮುಚ್ಚಿ ವಿದ್ಶಾರ್ಥಿಗಳನ್ನು ಹೊರ ಹಾಕಲಾಗಿದೆ. ವಿದ್ಶಾರ್ಥಿಗಳು ತಮ್ಮ ಮೂಲ ಶಾಲಾ ದಾಖಲೆಗಳು (ಇಲ್ಲಿಯವರೆಗೆ ಕಲಿತ ಶಾಲೆಯ ಅಂಕಪಟ್ಟಿಗಳು)ˌ ಸಂಶೋಧನೆಗಳುˌ ಸಂಗ್ರಹಯೋಗ್ಶ ಮಾಹಿತಿˌ ಪುಸ್ತಕಗಳು ಬಟ್ಟೆಗಳನ್ನು ಸಹ ಅಲ್ಲಿಯೇ ಬಿಟ್ಟು ಬಂದಿದ್ದಾರೆ.

ಜಿಲ್ಲಾಧಿಕಾರಿಗಳು ಈ ವಸತಿ ನಿಲಯಗಳನ್ನು ಹೋಂ ಕ್ವಾರಂಟೈನ್ ಕೇಂದ್ರಗಳಾಗಿ ಮಾಡಿದರೆ ವಿದ್ಶಾರ್ಥಿಗಳ ಗತಿ ಏನು? ಎಂದು ಸಂಶೋಧನಾ ವಿದ್ಶಾರ್ಥಿಗಳ ಒಕ್ಕೂಟದ ಅಧ್ಶಕ್ಷ ಮಿಲಿಂದ ಸುಳ್ಳದ ಪ್ರಶ್ನಿಸಿದ್ದಾರೆ.

ಹೋಂ ಕ್ವಾರಂಟೈನ್ ಮಾಡಿದಾಗ ಕೊರೊನಾ ರೋಗಿಗಳು ಈ ವಸತಿ ನಿಲಯದಲ್ಲಿ ಕಂಡು ಬಂದರೆ ಅಂತಹ ರೂಂಗಳಲ್ಲಿ ಇರುವವರು ಯಾರು? ಮತ್ತು ಹೋಂ ಕ್ವಾರಂಟೈನ್ ಮಾಡಿದ ವಸತಿ ನಿಲಯಗಳು ನಮಗೆ ಬೇಡವೆಂದರೆ ವಿಶ್ವವಿದ್ಶಾಲಯ ಬೇರೆ ಕಟ್ಟಡ ಕಟ್ಟಲು ಸಿದ್ದವಿದೆಯೇ ಎಂದೂ ಸಹ ಪ್ರಶ್ನಿಸಿದ್ದಾರೆ.

ಅಲ್ಲದೆ ಜಿಲ್ಲಾಡಳಿತ ಕೇವಲ ವಿಶ್ವವಿದ್ಶಾಲಯವನ್ನು ಪ್ರಯೋಗ ಮಾಡಲು ಬಳಸಿಕೊಳ್ಳುತ್ತಿದೆ. ಕನ್ನಡ ಸಾಹಿತ್ಶ ಸಮ್ಮೇಳನ ಮಾಡಿದಾಗಲೂ ಸಹ ನಮ್ಮ ವಿವಿಯನ್ನು ಬಳಸಿಕೊಂಡಿದೆ. ಕಕ ಅಭಿವ್ರದ್ಧಿ ಮಂಡಳಿಯಿಂದ ವಿವಿಗೆ ನಯಾಪೈಸೆ ಅನುದಾನ ನೀಡದ ಜಿಲ್ಲಾಡಳಿತಕ್ಕೆ ತುರ್ತು ಸಂದರ್ಭಗಳಲ್ಲಿ ಮಾತ್ರ ವಿವಿ ನೆನಪಿಗೆ ಬರುತ್ತಿದೆ ಎಂದು ಅತಿಥಿ ಉಪನ್ಶಾಸಕರ ಸಂಘದ ಗೌರವಾಧ್ಶಕ್ಷ ಡಾ.ಪ್ರಕಾಶ ಬಡಿಗೇರˌ ಅಧ್ಶಕ್ಷ ಡಾ.ಅರುಣಕುಮಾರ ಕುರ್ನೆ ಅಸಮಾಧಾನ ವ್ಶಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here