ಕಲಬುರಗಿ: ನಗರದ ಎಂ.ಎಸ್.ಕೆ ಮೀಲ್ ಪ್ರದೇಶದ ಆರೀಫ್ ಕಾಲೋನಿಯ ಯುವಕನೋರ್ವನನ್ನು ಇಂದು ಕೊಲೆ ಮಾಡಿರುವ ಘಟನೆ ನಗರದ ರಾಘವೇಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಂ.ಎಸ್.ಕೆ ಮಿಲ್ ಪ್ರದೇಶದ ನಿವಾಸಿಯಾದ ಮಹ್ಮದ್ ಜಾಕೀರ್ ಉರ್ಫ್ ಮಾಮು ಮಹ್ಮದ್ ಸಲೀಮ್ (30) ಕೊಲೆಯಾದ ವ್ಯಕ್ತಿ. ಜಾಕೀರ್ ಕುಖ್ಯಾತ ರೌಡಿ ಶೀಟರ್ ಎಂದು ತಿಳಿದುಬಂದಿದೆ.
ನಿನ್ನೆ ಮನೆಯಿಂದ ಹೊರಗೆ ಹೊಗಿದ್ದ ಜಾಕೀರ್ ಇಂದು ಸುಮಾರು ಮೂರುವರೆ ಸುಮಾರಿಗೆ ನೂತನ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕೋಣೆಯಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾನೆ.
ಪ್ರಕರಣದ ಕುರಿತು ಪೊಲೀಸ್ ತನಿಖೆ ನಡೆಸುತ್ತಿದ್ದಾರೆ.
ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು, ಕಲಬುರಗಿಯಲ್ಲಿ ಅಪರಾಧ ಪ್ರಕರಣ ಗಳ ಕಡಿಮೆಯಾಗಿದೆ ಎಂದು ಸಂತೋಷ ಪಡುತ್ತಿರುವ ಸಂದರ್ಭದಲ್ಲಿ ಈ ಪ್ರಕರಣ ನಡೆದಿದೆ.