ಶಹಾಪುರ: ಕರೋನಾ ವೈರಸ್ ನಿಂದ ಇಡೀ ಭಾರತ ದೇಶವೇ ನಲುಗಿ ಹೋಗಿದೆ ಇಂಥ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಕೇಸ್ ಪತ್ತೆಯಾಗದೆ ಇರುವುದಕ್ಕೆ ತುಂಬ ಸಂತೋಷ ವೆನಿಸುತ್ತಿದೆ.ಆದ್ದರಿಂದ ಇನ್ನೂ ಸ್ವಲ್ಪ ದಿನ ಯಾದಗಿರಿ ಜಿಲ್ಲೆಗೆ ಲಕ್ಷ್ಮಣ ರೇಖೆ ಹಾಕಬೇಕೆಂದು ಜಿಲ್ಲಾಡಳಿತಕ್ಕೆ ಯುವ ಮುಖಂಡ ಗುರು ಕಾಮಾ ಮನವಿ ಮಾಡಿಕೊಂಡಿದ್ದಾರೆ.
ಡೇಂಜರ್ ಜೋನ್ ಎಂದು ಕರೆಯಲ್ಪಡುತ್ತಿರುವ ಕಲಬುರಗಿಗೆ ಹಾಗೂ ಬಿಜಾಪುರ ಜಿಲ್ಲೆಗೆ ಅನ್ಯ ಮಾರ್ಗವಾಗಿ ಜನರು ಹೋಗಿ ಬರುತ್ತಿದ್ದಾರೆ ಇದರಿಂದ ನಮ್ಮ ಜಿಲ್ಲೆಗೆ ಸೋಂಕು ತಗುಲಬಹುದು, ಬೇಜವಾಬ್ದಾರಿ ವಹಿಸಿ ಯಾವುದೇ ಕಾರಣಕ್ಕೆ ಲಾಕ್ ಡೌನ್ ಸಡಿಲಿಕೆ ಮಾಡದೆ ಸ್ವಲ್ಪ ದಿನದ ಮುಟ್ಟಿಗೆ ಮತ್ತಷ್ಟು ಬೀಗಿಗೋಳಿಸಿ ಮುನ್ನೆಚ್ಚರಿಕೆ ಕ್ರಮದಿಂದ ಲಕ್ಷ್ಮಣ ರೇಖೆ ಹಾಕುವುದು ಸೂಕ್ತ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಸನ್ನತಿ, ವಾಡಿ,ಮಾರ್ಗವಾಗಿ ಕಲಬುರ್ಗಿಗೆ ಕೆಂಭಾವಿ ಮತ್ತು ಪೀರಾಪುರ ಮಾರ್ಗವಾಗಿ ವಿಜಯಪುರ ಜಿಲ್ಲೆಗೆ ಬೈಕ್ಗಳ ಮೂಲಕ ಹೋಗಿ ಬರುತ್ತಿದ್ದಾರೆ ಆದ್ದರಿಂದ ಗ್ರಾಮೀಣ ಭಾಗದ ರಸ್ತೆಗಳು ಕೂಡ ಪೊಲೀಸ್ ಇಲಾಖೆವತಿಯಿಂದ ಬಿಗಿ ಬಂದೋಬಸ್ತ್ ಮಾಡಬೇಕೆಂದು ಮನವಿ ಮಾಡಿಕೊಂಡರು.