ಕೊರೊನಾ ನಿರ್ಮೂಲನೆಗೆ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡೋಣ: ಅಶೋಕ ಕುಲಕರ್ಣಿ

0
37

ಸುರಪುರ: ಇಂದು ಕೊರೊನಾ ವೈರಸ್ ಜಗತ್ತನ್ನೆ ನಡುಗಿಸುತ್ತಿದೆ,ಇದರ ನಿರ್ಮೂಲನೆಗೆ ಎಲ್ಲರ ಸಹಕಾರವು ಅಗತ್ಯವಾಗಿದೆ,ಆದ್ದರಿಂದ ಕೊರೊನಾ ನಿರ್ಮೂಲನೆಗೆ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡೋಣ ಎಂದು ನಿವೃತ್ತ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ಕುಲಕರ್ಣಿ ಮಾತನಾಡಿದರು.

ಕೊರೊನಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಒಂದು ತಿಂಗಳ ನಿವೃತ್ತಿ ವೇತನ ೧೬,೧,೬೪ ರೂಪಾಯಿಗಳ ಚೆಕ್ ನೀಡಿ ಮಾತನಾಡಿ,ಕೊರೊನಾ ನಿರ್ಮೂಲನೆ ಇಂದು ಮುಖ್ಯವಾಗಿದೆ,ಇದಕ್ಕೆ ಸರಕಾರ ಕೂಡ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ.ಇದರಿಂದ ದೇಶಕ್ಕೆ ಮತ್ತು ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟುವುಂಟಾಗಿದೆ.ಇದನ್ನು ಮನಗಂಡು ಇಂದು ನನ್ನ ಒಂದು ತಿಂಗಳ ನಿವೃತ್ತಿ ವೇತನ ನೀಡುತ್ತಿದ್ದು ಇದಕ್ಕೆ ನಮ್ಮ ಕುಟುಂಬದವರ ಸಹಕಾರವಿದೆ ಎಂದರು.

Contact Your\'s Advertisement; 9902492681

ಪರಿಹಾರ ನಿಧಿಗೆ ದೇಣಿಗೆ ನೀಡಿದ ವಿಷಯ ಬಹಿರಂಗಕ್ಕೆ ನನಗೆ ಮನಸ್ಸಿಲ್ಲ ಆದರೆ ಇದು ಬೇರೊಬ್ಬರಿಗೂ ಪ್ರೇರಣೆಯಾಗಲಿ,ಇದರಿಂದ ಬೇರೊಬ್ಬರು ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ರಾಜ್ಯದ ನಷ್ಟ ಕಡಿಮೆಗೊಳಿಸಲು ಜನತೆ ಮುಂದಾಗಲೆಂಬ ಉದ್ದೇಶದಿಂದ ಹೇಳಿಕೆ ನಿಡುತ್ತಿರುವುದಾಗಿ ತಿಳಿಸಿ ಮುಖ್ಯಮಂತ್ರಿಗಳ ಹೆಸರಿಗೆ ಬರೆದ ಚೆಕ್‌ನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಗುರುಬಸಪ್ಪ, ಅಶೋಕ ಕುಲಕರ್ಣಿಯವರ ಸಹೋದರ ಅಪ್ಪಣ್ಣ ಕುಲಕರ್ಣಿ,ರಾಘವೇಂದ್ರ ಗೆದ್ದಲಮರಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here