ಲಾಕ್ ಡೌನ್ ನಿಯಮ ಉಲ್ಲಂಘನೆ ಎಂಟು ಜನರ ಮೇಲೆ ಪ್ರಕರಣ ದಾಖಲು

0
82

ಕಲಬುರಗಿ: ಲಾಕ್​ಡೌನ್ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆ ಗರ್ಭಿಣಿ ಮಹಿಳೆ ಹೊರತು ಪಡೆಸಿ, ಒಟ್ಟು ಎಂಟು ಜನರ ವಿರುದ್ಧ ಲಾಕ್​ಡೌನ್ ನಿಯಮ ಉಲ್ಲಂಘನೆ ಪ್ರಕರಣವನ್ನು ಇಲ್ಲಿನ ಕಮಲಾಪುರ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಕಮಲಾಪುರ ತಾಲೂಕಿನ ಗೊಬ್ಬುರವಾಡಿ ನಿವಾಸಿಯಾದ ಇವರು ಪತಿ ಹಾಗೂ ಮಕ್ಕಳೊಂದಿಗೆ ದುಡಿಮೆಗಾಗಿ ಹೈದರಾಬಾದ್​ಗೆ ಹೋಗಿದ್ದರು. ಹೆರಿಗೆಗಾಗಿ ತೆಲಂಗಾಣ ಪೊಲೀಸರಿಂದ ಪಾಸ್ ಪಡೆದು ಟಂಟಂನಲ್ಲಿ ಊರಿಗೆ ವಾಪಸ್ ಬಂದಿದ್ದರು. ಕಮಲಾಪುರ ಆರೋಗ್ಯ ಇಲಾಖೆ ಅಧಿಕಾರಿಗಳು ಇವರನ್ನು ಹೋಂ ಕ್ವಾರಂಟೈನ್ ಮಾಡಿದ್ದು, ಮರುದಿನ ಗರ್ಭಿಣಿಯ ಪತಿ ಮತ್ತು ತಾಯಿ ಸಮೀಪದ ಬೋಳೆವಾಡ ಗ್ರಾಮಕ್ಕೆ ತೆರಳಿದ್ದರು. ವಿಷಯ ತಿಳಿದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Contact Your\'s Advertisement; 9902492681

ಎಂಟು ಜನರನ್ನು ಕಮಲಾಪುರದ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here