ಕಲಬುರಗಿ: ಜಿಲ್ಲೆಯಲ್ಲಿವಿವಿದ ಹಳ್ಳಿಗಳಲ್ಲಿ ಬೇಸಿಗೆ ಮಳೆಯಾಗಿದ್ದು, ಈಗಾಗಲೇ ಹೊಲದಲ್ಲಿಕಟಾವು ಆಗಿ ಖಾಲಿ ಹೊಲಗಳಲ್ಲಿ ಮಾಗಿ ಉಳುಮೆ ಮಾಡಿ ಮಳೆ ನೀರುಕೊಯ್ಲು ಆರಂಭಿಸಲು ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯ ಕೆವಿಕೆ ವಿಜ್ಞಾನಿಗಳಾದ ಡಾ. ರಾಜು ಜಿ ತೆಗ್ಗಳಿ ಸಲಹೆ ನೀಡಿದ್ದಾರೆ.
ಇನ್ನು ನಾಲ್ಕೈದು ಬೇಸಿಗೆ ಮಳೆ ಚದುರಿದಂತೆ ಬರುವುದರಿಂದರೈತರು ಸಾಮಾಜಿಕ ಅಂತರಕಾಯ್ದು, ಆರೋಗ್ಯಕ್ಕೆ ಒತ್ತು ನೀಡಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ತರಕಾರಿ, ಹಣ್ಣುಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಮಾರಾಟ ಮಾಡಬೇಕು. ಹಣ್ಣುಗಳನ್ನು ತಾಲೂಕು ಹಾಗೂ ಜಿಲ್ಲೆಗಳಿಗೆ ಮಾರಾಟ ಮಾಡಲು ತೋಟಗಾರಿಕಾ ಇಲಾಖೆಯಿಂದ’ಪಾಸ್’ ಪಡೆಯುವುದು ಉತ್ತಮ. ಹೊಲದಲ್ಲಿಕಟಾವಾದ ಈರುಳ್ಳಿಯನ್ನು ಕೊಯ್ಲು ನಂತರ ಸೂಕ್ತವಾಗಿ ಸಂರಕ್ಷಿಸಬೇಕು ಎಂದರು.
ಕೃಷಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಮೊಬೈಲ್ ದೂರವಾಣಿ ಮೂಲಕ ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು. ಕಲಬುರಗಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಪ್ರತಿ ವಾರ್ಡಗಳಿಗೂ ತರಕಾರಿ ಹಾಗೂ ಹಣ್ಣು ಮಾರಾಟ ವ್ಯವಸ್ಥೆ ಮಾಡಿರುವುದು ಸಾರ್ವಜನಿಕರಿಗೆ ಅನುಕೂಲಕರ ವಾಗಿದೆ. ರಂಜಾನ್ ತಿಂಗಳು ಆರಂಭವಾಗಿವುದರಿಂದ ಹಣ್ಣಿನ ಬೇಡಿಕೆ ಹಾಗೂ ಮಾರುಕಟ್ಟೆ ಸುದಾರಿಸುವ ಸಾಧ್ಯತೆ ಎಂದು ಜಹೀರ್ ಅಹಮದ್ ರವರು ತಿಳಿಸಿದರು.