ಕಲಬುರಗಿ: ಕಿಲ್ಲರ ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ ಜಿಲ್ಲೆಯ 80ವರ್ಷದ ವ್ಯಕ್ತಿ ಬಲಿಯಾಗಿದ್ದು ಸೇರಿ ಮೂವರಿಗೆ ಸೋಂಕು ತಗಲಿರುವುದಾಗಿ ದೃಢ ಪಟ್ಟಿದೆ. ಪೀಡಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯ ನಾಲ್ಕನೇ ವ್ಯಕ್ತಿ ಮೃತಪಟ್ಟಿದ್ದಾರೆ.
80 ವರ್ಷದ ವೃದ್ಧ ಕಳೆದ 3 ವರ್ಷಗಳಿಂದ ಪಾರ್ಕಿನ್ಸನ್ ನಿಂದ ಬಳಲುತ್ತಿದ್ದ, ಮೊನ್ನೆ ಮಧ್ಯರಾತ್ರಿ ಜ್ವರ ಇದ್ದುದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ನಿನ್ನೆ ಬೆಳಗ್ಗೆ 9 ಗಂಟೆಗೆ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಮೃತರಿಗೆ ಸೋಂಕು ಇರುವುದಾಗಿ ವರದಿ ದೃಢಪಡಿಸಿದ್ದು, ಮೃತ ವ್ಯಕ್ತಿ ಸೇರಿ 61 ಮತ್ತು 29 ವರ್ಷದ ಮೂವರಿಗೆ ವೈರಸ್ ತಗುಲಿರುವುದು ಖಚಿತ ಪಟ್ಟಿದೆ.
ಇಂದು ಬಂದಿರುವ ವರದಿಯಲ್ಲಿ ಮೂವರಿಗೂ ಸೋಂಕು ತಗಲಿರುವುದು ಹೇಗೆ ಎಂಬುದುನ್ನು ಪತ್ತೆ ಹಚ್ಚಲಾಗುತ್ತಿದೆ. ಮೃತ ವ್ಯಕ್ತಿ ಸೇರಿ ಇಬ್ಬರಿಗೆ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತಿವುದಾಗಿ ವೈದ್ಯಕೀಯ ವರದಿ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್-19 ಬಲಿಯಾದವರ ಸಂಖ್ಯೆ 17ಕ್ಕೆ ಏರಿಕೆ ಆಗಿದ್ದು, ಜಿಲ್ಲೆಯ ನಾಲ್ಕನೇ ವ್ಯಕ್ತಿ ಸಾವನಪ್ಪಿದ್ದಾರೆ.