ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಾಗಲು ಪ್ರೆಸ್ ಕ್ಲಬ್ ನ ಕಾರ್ಯಕಾರಿ ಸಮಿತಿಯ ನಿಯೋಗ , ಆಹಾರ, ನಾಗರಿಕ ಮತ್ತು ಗ್ರಾಹಕ ವ್ಯಪಾರಗಳ ಸಚಿವರಾದ ಕೆ.ಗೋಪಾಲಯ್ಯ ರವರ ಗಮನಕ್ಕೆ ತಂದಿದ್ದರು. ಮಾಧ್ಯಮ ಮಿತ್ರರ ಕಷ್ಟಗಳನ್ನರಿತ ಸಚಿವರು ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ವತಿಯಿಂದ. ಆರ್ಥಿಕ ಸಂಕಷ್ಟದಲ್ಲಿರುವ ಕ್ಲಬ್ ನ ಸದಸ್ಯರಿಗೆ 25 ಕೆಜಿ ಅಕ್ಕಿ, 5 ಕೆಜಿ ಗೋದಿ ಹಿಟ್ಟು, 3 ಕೆಜಿ ತೊಗರಿ ಬೇಳೆ, 2 ಲೀ ಅಡುಗೆ ಎಣ್ಣೆ, 1 ಕೆಜಿ ಉಪ್ಪು ಹಾಗೂ 1/2ಕೆಜಿ ಸಾಂಬಾರು ಪುಡಿಯಿರುವ ಆಹಾರದ ಕಿಟ್ಟನ್ನು ಒಂದು ಸಾವಿರ ಮಾಧ್ಯಮ ಮಿತ್ರರಿಗೆ ವಿತರಣೆ ಮಾಡಿದರು.
ಆ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ ಗೋಪಾಲಯ್ಯಾ ರವರು ಇದೇ ಮೊದಲ ಬಾರಿ 91% ರಷ್ಟು ಜನ ನ್ಯಾಯಬೆಲೆ ಅಂಡಿಯಲ್ಲಿ ಪಡಿತರ ಧಾನ್ಯ ಪಡೆದುಕೊಂಡಿದ್ದಾರೆ. ಪ್ರತಿಭಾರಿ 89% ಮೇಲೆ ಯಾವತ್ತು ಹೋಗಿಲ್ಲ. 86,87,88% ಪರ್ಸೆಂಟ್ ಇತ್ತು. ಹಾಗಾಗಿ ಇದು ದಾಖಲೆಯಾಗಿದೆ.
ಜೊತೆಗೆ ಕೇಂದ್ರ ಸರ್ಕಾರದಿಂದ ಕೊಟ್ಟಿರುವಂತ ಪಡಿತರ ರೇಷನ್ ವಿತರಣೆಯನ್ನ ಮೇ 1 ನೇ ತಾರೀಖಿನಿಂದ ಪ್ರರಂಭ ಮಾಡ್ತೀವಿ. ಒಬ್ಬೊಬ್ಬರಿಗೆ ಏಪ್ರಿಲ್ ಮತ್ತು ಮೇ ಎರಡು ತಿಂಗಳ 10kg ಅಕ್ಕಿ 1ಕೆಜಿ ಬೇಳೆಯನ್ನ ಕೊಟ್ಟು. ಮುಂದಿನ ತಿಂಗಳು ಜೂನ್ ಗೆ 5 kg ಅಕ್ಕಿ , 2 kg ಬೇಳೆ. ಹಾಗೇ ರಾಜ್ಯ ಸರ್ಕಾರದಿಂದ ಮತ್ತೆ ಒಬ್ಬರಿಗೆ 5 ಕೆಜಿ ಅಕ್ಕಿ, ಒಂದು ಕುಟುಂಬಕ್ಕೆ ಒಬ್ಬರಿಗೆ 2 ಕೆಜಿ ಗೋಧಿಯನ್ನ ಕೊಡಲಾಗುತ್ತೆ. ಮತ್ತು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದ 11 ಸಾವಿರಕ್ಕೂ ಹೆಚ್ಚಿನ ಗ್ರಾಹಕರು, ಈಗಾಗಲೇ ಅಂಗಡಿಗಳಿಗೆ ಹೋಗಿ ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿ ತೆಗೆದುಕೊಂಡಿದ್ದಾರೆ. ಮತ್ತು ಎಪಿಎಲ್ ಕಾರ್ಡ್ ಮಾಡಿಸಿಕೊಂಡಿರುವ ಮತ್ತು ಅರ್ಜಿ ಸಲ್ಲಿಸಿದವರಿಗೆ ಸರ್ಕಾರದ ತೀರ್ಮಾನ ಪ್ರಕಾರ ಮತ್ತು ನಾನು ಆರೋಗ್ಯ ಸಚಿವನಾಗಿ ಎಲ್ಲಾ ಕಾರ್ಡುದಾರರಿಗೆ 25 ರುಪಾಯಿಯಂತೆ ಅಕ್ಕಿಯನ್ನ ನೀಡದೆ, ಜನಕ್ಕೆ 15 ರುಪಾಯಂತೆ ಅಕ್ಕಿಯನ್ನ ಕೊಡುತ್ತಿದ್ದೇವೆ.
ಅಲ್ಲದೆ ಆಹಾರ ಪಡಿತರ ವ್ಯವಸ್ಥೆಯಲ್ಲಿ ದಸ್ತಾನು ಇಲ್ಲ ಅನ್ನುವ ಮಾತಿಲ್ಲ. ಏಪ್ರಿಲ್ ಮೊದಲವಾರ ಜನರಲ್ಲಿ ಸ್ವಲ್ಪ ನೂಕುನುಗ್ಗಲು ಆಯ್ತು ಆದ್ರೆ ಮುಂದೆ ಆ ರೀತಿ ಆಗೋದಿಲ್ಲ. ಸಾಕಷ್ಟು ಪಡಿತರ ಧಾನ್ಯ ನಮಗೆ ಕೇಂದ್ರ ಸರ್ಕಾರದಿದ ಬರ್ತಿದೆ. ಯಾವುದೇ ರೀತಿಯಲ್ಲು ಜನರು ಆತಂಕಕ್ಕೆ ಒಳಗಾಗುವುದು ಬೇಡ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಘೋಷಣೆಯಂತೆ ಆಹಾರ ಧಾನ್ಯಗಳ ವಿತರಣೆಯನ್ನ ನಮ್ಮ ಸರ್ಕಾರ ಮಾಡುತ್ತೆ.
ಜೊತೆಗೆ ಕೇಂದ್ರ ಸರ್ಕಾರ ಮೂವತ್ತೊಂದುವರೆ ಲಕ್ಷ ಜನರಿಗೆ ಮೂರುತಿಂಗಳು ಮೂರು ಸಿಲಿಂಡರ್ ತೆಗೆದುಕೊಳ್ಳೋದಕ್ಕೆ ಒಂದು ತಿಂಗಳ ಹಣವನ್ನ ಈಗಾಗಲೇ ಗ್ರಾಹಕರ ಖಾತೆಗೆ ಹಾಕಿದೆ. ಗ್ರಾಹಕರು ಸಿಲಿಂಡರ್ ಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಮುಖ್ಯ ಮಂತ್ರಿಗಳ ಅನಿಲ ಭಾಗ್ಯ ಯೋಜನೆಗೆ 25 ಕೋಟಿ ಹೆಚ್ಚುವರಿ ಹಣವನ್ನ ಕೊಡೋದಕ್ಕೆ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದು. ಯಾರು ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೂ ಮೂರುತಿಂಗಳ ಗ್ಯಾಸ್ ಸಿಲಿಂಡರ್ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ.
ನ್ಯಾಯ ಬೆಲೆ ಅಂಗಡಿಗಳಿಗೆ ದಿಢೀರ್ ಬೇಟಿ ನೀಡಿದಂತ ಸಂದರ್ಭದಲ್ಲಿ 116 ಅಂಗಡಿಗಳನ್ನ ಈ ತಿಂಗಳು ಅಮಾನತ್ತು ಮಾಡಲಾಗಿದೆ. ಇದರಿಂದ ಅಂಗಡಿ ಮಾಲಿಕರು ಹೆಚ್ಚೆತ್ತುಕೊಳ್ಳಬೇಕು. ಇನ್ನು ಮುಂದೆಯೂ ಜನರಿಗೆ ನ್ಯಾಯಬೆಲೆ ಅಂಗಡಿ ಮಾಲಿಕರು ಮೋಸ ಮಾಡಿದ್ದು ಕಂಡುಬಂದರೆ ಇನ್ನು ಹೆಚ್ಚಿನ ಕಠಿಣ ಕ್ರಮಗಳನ್ನು ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.
ಇನ್ನೂ ಈ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ, ನಗರ ಜಿಲ್ಲಾ ಬಿಜೆಪಿ ಘಟಕದ ಕಾರ್ಯದರ್ಶಿ ಗಂಗಹನುಮಯ್ಯ, ಪ್ರೆಸ್ ಕ್ಲಬ್ ನ ಅಧ್ಯಕ್ಷ ಸದಾಶಿವ ಶೆಣೈ, ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಹೆಚ್.ವಿ ಕಿರಣ್, ಮಾಧ್ಯಮ ಸಲಹೆಗಾರ ಮುನಿರಾಮೇ ಗೌಡ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ರು.