ಕಲಬುರಗಿ: ಕೋವಿಡ್-19 ಪ್ರಕರಣಗಳನ್ನು ಕಂಡುಹಿಡಿಯಲು ಕಲಬುರಗಿ ನಗರದಲ್ಲಿ 8 ಮತ್ತು ತಾಲೂಕಾ ಹಂತಗಳಲ್ಲಿ 15 ಸೇರಿದಂತೆ ಜಿಲ್ಲೆಯಾದ್ಯಂತ 23 ಕಡೆ ಜ್ವರ ತಪಾಸಣಾ ಕೇಂದ್ರಗಳು (ಫೀವರ್ ಕ್ಲಿನಿಕ್) ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕಲಬುರಗಿ ನಗರದ ಫೀವರ್ ಕ್ಲಿನಿಕ್‍ಗಳ ವಿವರ: ಪ್ರಾಥಮಿಕ ಅರೋಗ್ಯ ಕೇಂದ್ರ ಅಶೋಕ ನಗರ, ಪ್ರಾಥಮಿಕ ಅರೋಗ್ಯ ಕೇಂದ್ರ ಶಿವಾಜಿ ನಗರ, ಪ್ರಾಥಮಿಕ ಅರೋಗ್ಯ ಕೇಂದ್ರ ನ್ಯೂ ರೆಹಮತ್ ನಗರ, ತಾರಪೈಲ್ ಸಾರ್ವಜನಿಕ ಆಸ್ಪತ್ರೆ, ಲಿಮ್ರಾ ಪಬ್ಲಿಕ್ ಶಾಲೆ ಶಾದಾಬ್ ಫಂಕ್ಷನ್ ಹಾಲ್ ಹಿಂದುಗಡೆ ಮೆಕ್ಕಾ ಕಾಲೋನಿ, ಉಮರ್ ಕಾಲೋನಿ ಅಜಾದಪೂರ ರಸ್ತೆ ಸಬೇರಾ ಅಲ್ ಕುಮರ್ ಮಸೀದಿ ಬಳಿ, ನೂರಿ ಪಬ್ಲಿಕ್ ಶಾಲೆ ಪೀರ್ ಬಂಗಾಲಿ ದರ್ಗಾ ಬಳಿ ನೂರಾನಿ ಮೊಹಲ್ಲಾ, ಸರ್ಕಾರಿ ಪ್ರಾಥಮಿಕ ಶಾಲೆ ಸೋನಿಯ ಗಾಂಧಿ ಕಾಲೋನಿ, ಹಜ್ ಕಮಿಟಿ ನಯಾ ಮೋಹಲ್ಲಾ ಮೋಮಿನಪುರ, ಸರ್ಕಾರಿ ಪ್ರಾಥಮಿಕ ಶಾಲೆ ಆದರ್ಶ ನಗರ, ಅರೇಬಿ ಮದ್ರಾಸಾ ಮುಸ್ಲೀಂ ಚೌಕ್ ಸಮೀಪ ಮೋಮಿನಪುರ, ಅಲ್ ಅಮೀನ್ ಹಿರಿಯ ಪ್ರಾಥಮಿಕ ಶಾಲೆ ಬುಕಾರಿ ಮಸೀದಿ ಹತ್ತಿರ ಸಂತ್ರಾಸವಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೋಜಾ ಲೈನ್-2 ರಾಮಜೀ ನಗರ, ಇ.ಎಸ್.ಐ.ಸಿ. ಆಸ್ಪತ್ರೆ ಕೇಂದ್ರ ಬಸ್ ನಿಲ್ದಾಣ ಹಿಂದುಗಡೆ, ನಗರ ಆರೋಗ್ಯ ಕೇಂದ್ರ ಮಾಣಿಕೇಶ್ವರಿ ಕಾಲೋನಿ.
ತಾಲೂಕಾ ಹಂತದಲ್ಲಿರುವ ಫೀವಿರ್ ಕ್ಲೀನಿಕ್‍ಗಳ ವಿವರ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಾದ ಅಫಜಲಪೂರ, ಆಳಂದ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಸೇಡಂ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಾದ ವಾಡಿ ಮತ್ತು ಶಹಾಬಾದ.
ಈ ಕೇಂದ್ರಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಪಾಳಿ ಆಧಾರದ ಮೇಲೆ ವೈದ್ಯರು, ಸ್ಡಾಫ್ ನರ್ಸ್ ಹಾಗೂ ಇನ್ನಿತರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಲಿದ್ದಾರೆ.
ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆ ಕಂಡುಬಂದಲ್ಲಿ ಜಿಲ್ಲೆಯ ಸಾರ್ವಜನಿಕರು ಸಮೀಪದ ಈ ಜ್ವರ ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಡಿ.ಸಿ. ಶರತ್ ಬಿ. ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರಿಂದ ದೂರು ಸ್ವೀಕರಿಸಲು ಜಿಲ್ಲಾ
ಕೊರೋನಾ ವೈರಸ್ ನಿಯಂತ್ರಣ ಕೊಠಡಿ ಸ್ಥಾಪನೆ
ಕಲಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕೊರೋನಾ ವೈರಸ್‍ಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಾಲಯದಲ್ಲಿ ಕೊರೋನಾ ವೈರಸ್ ನಿಯಂತ್ರಣಾ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ತಿಳಿಸಿದ್ದಾರೆ.
ಜಿಲ್ಲಾ ಕೊರೋನಾ ವೈರಸ್ ನಿಯಂತ್ರಣಾ ಕೊಠಡಿಯ ದೂರವಾಣಿ ಸಂಖ್ಯೆ 08472-278677, 278604, 278648, 278698 ಹಾಗೂ ಉಚಿತ ಸಹಾಯವಾಣಿ ಸಂಖ್ಯೆ 1047 ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಈ ಸಹಾಯವಾಣಿಯು 24X7 ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.