-ಸಾಜಿದ್ ಅಲಿ
ಕಲಬುರಗಿ: ಕೊರೊನಾ ವೈರಸ್ ಗೆ ಯಾವುದೇ ಜಾತಿ ಮತ ವಿಲ್ಲ, ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಅತಿಹೆಚ್ಚು ಕೊರೋನಾ ಪಾಜಿಟಿವ್ ಕಂಡು ಬಂದಿರುವುದು ಕೇವಲ ಕಾಕತಾಳೀಯ ಮಾತ್ರ ಎಂದು ಉತ್ತರ ಮತ್ತ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಹೇಳಿದರು.
ಉತ್ತರ ಮತಕ್ಷೇತ್ರದಲ್ಲಿ ಹೆಚ್ಚು ಕೊರೊನಾ ಪಾಜಿಟಿವ್ ಕೇಸ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಇ-ಮೀಡಿಯಾ ಲೈನ್ ತಂಡ ಮಾತನಾಡಿಸಿದಾಗ ಅವರ ನೇರ ಮಾತುಕತೆ ಮೂಲಕ ತಿಳಿಸಿದ್ದಾರೆ
ಪ್ರ. ನಿಮ್ಮ ಕ್ಷೇತ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ನಿಮ್ಮಿಂದ ಯಾವ ಕ್ರಮ ಕೈಗೊಳ್ಳಲಾಗಿದೆ?
ಉ. ನಾವು ಇ.ಎಸ್.ಯ.ಸಿ ಡೀನ್ ಜೊತೆ ಮಾತನಾಡುತ್ತಿದ್ದೇವೆ. ಏನಾದರೂ ಕೊರತೆ ಇದೆಯಾ? ಎಂದು ಕೇಳಿದೇವು ಅವರು ನೀರು. ಹಣ್ಣ ಮತ್ತು ಮೊಟ್ಟೆ ವ್ಯವಸ್ಥೆ ಬಗ್ಗೆ ಕೊರಿದ್ದರು, ಅದನ್ನು ತಲುಪಿಸಲಾಗುತ್ತಿದೆ. ಅದೇ ರೀತಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯದ ಕುರಿತು ಮಾಹಿತಿ ಪಡೆಯುತ್ತಿದ್ದೇನೆ,
ಪ್ರ. ನೂರಾರು ಜನಸಂಖ್ಯೆಯಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮತ್ತು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ. ಅಲ್ಲಿಯೂ ಜನರು ಸಮಸ್ಯೆಗಳು ಎದುರಿಸುತ್ತಿದ್ದಾರೆ.
ಉ. ಅಲ್ಲಿಯೂ ಸಹ ಇಲಾಖೆಯಿಂದ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗೊಂದಿಗೆ ನಾನು ಮಾತು ಕತೆ ನಡೆಸಿದ್ದೇನೆ ಅವರಿಗೆ ಸಮಯಕ್ಕೆ ಸರಿಯಾಗಿ ಊಟ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಯಾವುದೇ ರೀತಿ ಸಮಸ್ಯೆ ಇಲ್ಲ.
ಪ್ರ. ಸಾರ್ವಜನಿಕರು ತರಕಾರಿಗಾಗಿ ಪರದಾಡುತ್ತಿದ್ದಾರೆ. ನಗರದ ರೋಜಾ ಮತ್ತು ಕೆ.ಸಿ.ಟಿ ಮೈದಾನದಲ್ಲಿ ಮಾರಾಟ ನಿಷೇಧಿಸಲಾಗಿದೆ.
ಉ. ಕೆಸಿಟಿ ಮೈದಾನದಲ್ಲಿ ಸಾಮಾಜಿಕ ಅಂತರ ಕಾಯ್ದೆ ನಿಯಮ ಉಲ್ಲಂಘನೆಯಾಗುತ್ತಿದ್ದು, ಮಾರಾಟಗಾರರು ಮಾರಾಟಗಾರರು ಎಚ್ಚರಿಕೆ ವಹಿಸದಿರುವುದರಿಂದ ಅಲ್ಲಿ ಮಾರಾಟ ಮಾಡುವುದು ಸದ್ಯ ಸ್ಥಗಿತಗೊಳಿಸಲಾಗಿದ್ದು, ಸದ್ಯ ಪ್ರತಿ ವಾರ್ಡ್ ನಲ್ಲಿ ನಾಲ್ಕು ಐದು ಸ್ಥಳದಲ್ಲಿ ತರಕಾರಿ ಮತ್ತು ಹಣ್ಣುಗಳ ಮಾರಾಟಕ್ಕೆ ಅನುಮತಿ ನೀಡಲಾಗುವುದು. ಇವರು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸಮಯ ನೀಡಲಾಗುತ್ತಿದೆ. ಅದೇ ರೀತಿ ನಗರದ ಪೀರ ಬಂಗಾಲಿ ಮೈದಾನದಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಸಮಯ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರ. ದಿನೆ ದಿನೆ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದಕ್ಕೆ ಕಾರಣ ಏನಿರಬಹುದು.?
ಉ. ಡೋರ್ ಟು ಡೋರ್ ಟೆಸ್ಟ್ ಮಾಡುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ ಅವರು ಹೇಳಿದ್ದಾರೆ. ಈ ರೀತಿ ಟೇಸ್ಟಿಂಗ್ ಪ್ರಾರಂಭವಾದರೆ ಒಳ್ಳೆಯದು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರ ಮೂಲಕ ಡೋರ್ ಟೂ ಡೋರ್ ಹೋಗಿ ಚೆಕಪ್ ಮಾಡಲಿದ್ದಾರೆ. ಇದಕ್ಕೆ ನನ್ನ ಕ್ಷೇತ್ರದ ಜನರು ಸಹ ಸಹಕರಿಸಬೇಕೆಂದು ಮನವಿ ಮಾಡಿದರು.
ಪ್ರ. ಏಕೆ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ಇಲಾಖೆಯ ಏನಾದರು ವರದಿ ಬಂದೀಯಾ.?
ಉ. ನೀವೆ ನೋಡ್ತಾಯಿದಿರಿ, ಪೀಡಿತರಿಗೆ ಮೊದಲೇ ಸಂಪರ್ಕ, ಪ್ರೈಮರಿ ಕಾಂಟ್ಯಾಕ್ಟ್ ಸಂಪರ್ಕ್, ಸೆಕಂಡರಿ ಕಾಂಟ್ಯಾಕ್ಟ್ ಬಂದಿರುವರ ಸಂಪರ್ಕ ಹೊಂದಿರುವವರನ್ನು ಪರೀಕ್ಷೆ ಒಳಪಡಿಸಿ ಆರೋಗ್ಯ ಇಲಾಖೆ ಕ್ರಮ ಕೈಗೊಳುತ್ತಿದೆ. ಮುಂದಿನ ದಿನಗಳಲ್ಲಿ ಕಡಿಮೆ ಆಗುತ್ತದೆ.
ಪ್ರ. ಕಲಬುರಗಿಯ ಇತ್ತರೆ ಕ್ಷೇತ್ರಗಳಿಗೆ ಹೋಲಿಸಿದರೆ, ಉತ್ತರಕ್ಕೆ ಇಷ್ಟೊಂದು ಆಘಾತ ಹೇಗೆ.?
ಉ. ಇದು ಒಂದು ಕೇವಲ ಕಾಕಾತಾಳಿ ಅಂತ ಹೇಳಬಹುದು.
ಅಲ್ಲದೇ ಇನ್ನೂ ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸೇರಿ ಶಾಸಕರು ಯಾವ ರೀತಿಯಲ್ಲಿ ಕ್ರಮಗಳು ಕೈಗೊಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪೀಡಿತರ ಕಂಡು ಬರುತ್ತಿರುವುದು ಕಾಕತಾಳೀಯ ವಿಷಯವಾಗಿದ್ದರೂ, ಸಹ ಜನರ ದಿವ್ಯ ನಿರ್ಲಕ್ಷ್ಯ ಮತ್ತು ಕೊರೊನಾ ವೈರಸ್ ನ ಪ್ರಭಾವದ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಕೊರತೆ ಇನ್ನೊಂದು ಕಾರಣವಾಗಿರಬಹುದೇ?, ಮಹಾಮಾರಿ ಕೋವಿಡ್-19 ವೈರಸ್ ನ್ನು ಜಿಲ್ಲೆಯಿಂದ ತೊಲಗಿಸಲು ಜಿಲ್ಲಾಡಳಿತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಇಲಾಖೆ ಜೊತೆ ನಿಯಮ ಬದ್ಧವಾಗಿ ಕೈಜೊಡಿಸಿ ಹೋರಾಟ ನಡೆಸಬೇಕಾಗಿದೆ ಅಲ್ಲದೇ, ಆರೋಗ್ಯ ಇಲಾಖೆ ನೀಡುವ ಸಲಹೆ ಸೂಚನೆಗಳು ಚಾಚು ತಪ್ಪದೆ ಪಾಲಿಸುವ ಅಗತ್ಯವಿದೆ.