ಲಾಕ್‌ಡೌನ್ ಪರಿಣಾಮ ಕೆಎಸ್ಸಾರ್ಟಿಸಿಗೆ ೮೧೬.೨೩ಕೋಟಿ ರೂ.ನಷ್ಟ

0
40

ಬೆಂಗಳೂರು: ಕೊರೋನ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಲಾಕ್‌ಡೌನ್ ಘೋಷಿಸಿದಾಗಿನಿಂದ ಎ.೨೦ರವರೆಗೆ ಕೆಎಸ್ಸಾರ್ಟಿಸಿಗೆ ಸುಮಾರು ೮೧೬.೨೩ಕೋಟಿ ರೂ.ನಷ್ಟವಾಗಿದೆ.

ರಾಜ್ಯ ಸರಕಾರವು ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರಯಾಣಿಕರ ಹಿತದೃಷ್ಟಿಯಿಂದ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದಾಗಿ ಕೆಎಸ್ಸಾರ್ಟಿಸಿಗೆ ೩೧೪.೮೯ಕೋಟಿ ರೂ. ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆಗೆ ೧೭೨ಕೋಟಿ ರೂ., ಈಶಾನ್ಯ ಸಾರಿಗೆಗೆ ೧೮೦ಕೋಟಿ ರೂ. ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ೧೪೯.೩೪ಕೋಟಿ ರೂ. ನಷ್ಟವಗಿದೆ ಎಂದು ಕೆಎಸ್ಸಾರ್ಟಿಸಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here