ಶಹಾಬಾದ: ನಗರದಲ್ಲಿ ಕರೋನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಗರಸಭೆ ನಗರದ ಎಲ್ಲಾ ಬಡಾವಣೆಯ ಪ್ರಮುಖ ರಸ್ತೆಯಲ್ಲಿ ರಾಸಾಯನಿಕದಿಂದ ಸಿಂಪಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಯಿತು.
ರಾಸಾಯನಿಕ ಸಿಂಪರಣೆಗೆ ನೀರಿನ ಟ್ಯಾಂಕ್ ಇರುವ ಟ್ರ್ಯಾಕ್ಟರ್ ಹಾಗೂ ಸ್ಪ್ರೆಯರ್ ಅನ್ನು ನಗರ ಉದ್ದೂದ್ ಖಾನ್ ಎಂಬುವವರು ಸಹಾಯಕ್ಕೆ ಮುಂದೆ ಬಂದಿದ್ದಾರೆ.ಅವರ ನೆರವಿನಿಂದ ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ನಗರದ ೨೭ ವಾರ್ಡಗಳಲ್ಲಿ ಸಿಂಪರಣೆಗೆ ಮುಂದಾಗಿದ್ದಾರೆ.
ಯಾವುದೇ ಕಾರಣಕ್ಕೂ ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ. ನಗರಸಭೆಯಿಂದ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೆವೆ.ಅಲ್ಲದೇ ಸಾರ್ವಜನಿಕರು ಹೊರಗಡೆ ಬರದೇ ಮನೆಯಲ್ಲಿದ್ದರೇ ಸಾಕು. ಅದುವೇ ಕರೊನಾ ವೈರಸ್ಗೆ ದೊಡ್ಡ ಮದ್ದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ವರ್ಮಾ, ಪಿಐ ಅಮರೇಶ.ಬಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ರಾಜೇಶ, ಶರಣು, ಡಾ.ಅಹ್ಮದ್ ಪಟೇಲ್, ಹುಣೇಶ ಇತರರು ಇದ್ದರು.