ಅಬಕಾರಿ ದಾಳಿ: ಮತ್ತೆ ಮೂರು ಪ್ರಕರಣ ದಾಖಲು

0
30

ಕಲಬುರಗಿ: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಾಗಿ ಕಲಬುರಗಿ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕಲಬುರಗಿ ವಿಭಾಗದ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಗುರುವಾರ ಸಣ್ಣೂರ ತಾಂಡಾದ ಹೊರಗಡೆ ವಿವಿಧ ಹೊಲಗಳಲ್ಲಿ ದಾಳಿ ನಡೆಸಿ ಒಟ್ಟು ೩೫೦ ಲೀ. ಬೆಲ್ಲದ ಕೊಳೆ ಹಾಗೂ ೧೫ ಲೀ. ಕಳ್ಳಭಟ್ಟಿ ಸಾರಾಯಿ ಜಪ್ತಿಪಡಿಸಿಕೊಂಡು ೦೩ ಪ್ರಕರಣ ದಾಖಲಿಸಲಾಗಿದೆ.

ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶ ಹಾಗೂ ಕಲಬುರಗಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಕಲಬುರಗಿ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ ನೇತೃತ್ವದಲ್ಲಿ ಡಿಸಿಇಐಬಿ ವಲಯ ನಂ.೧ರ ಅಬಕಾರಿ ನಿರೀಕ್ಷಕ ಹಾಗೂ ಉಪ ವಿಭಾಗದ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಲಾಗಿದೆ.

Contact Your\'s Advertisement; 9902492681

ಉಪವಿಭಾಗದ ಅಬಕಾರಿ ಉಪ ನಿರೀಕ್ಷಕ ಸಂತೋಷ ಕುಮಾರ ಹಾಗೂ ಕಲಬುರಗಿ ವಲಯ ನಂ. ೧ರ ಅಬಕಾರಿ ಉಪ ನಿರೀಕ್ಷಕ ದಾವಲಸಾಬ ಹಾಗೂ ಕಲಬುರಗಿ ಡಿಸಿಇಐಬಿ ಅಬಕಾರಿ ನಿರೀಕ್ಷಕ ಪಂಡಿತ ಅವರು ತಲಾ ಒಂದು ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಜಪ್ತಿ ಮಾಡಲಾದ ಒಟ್ಟು ಮದ್ಯದ ಅಂದಾಜು ಮೌಲ್ಯ ೮೦೦೦ ರೂ. ಇರುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here