ಕಲಬುರಗಿ: ಇಲ್ಲಿನ ಜೇವರ್ಗಿ ಕಾಲನಿಯ ದೇವಜ ಅರಸು ಮೆಟ್ರಿಕ್ ನಂತರದ ಬಲಕರ ವಸತಿ ನಿಲಯ ಹತ್ತಿರ ನಿನ್ನೆ ರಾತ್ರಿ ಕೆಲವರನ್ನು ಕ್ವಾರಂಟೈನ್ ಇಡಲಾಗಿದೆ ಎಂದು ಇವರನ್ನು ಬೇರೆ ಕಡೆಗೆ ಸ್ಥಾಳಾಂತರಿಸಬೇಕೆಂದು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ನಿವಾಸಿ ಶಿವುಸ್ವಾಮಿ ಮಾತನಾಡಿ ನಿನ್ನೆ ರಾತ್ರಿ 7 ಜನರನ್ನು ಕ್ವಾರಂಟೈನ್ ಇಡಲಾಗಿದೆ. ಕಾಲನಿಯಲ್ಲಿ ಹೆಚ್ಚು ಹಿರಿಯ ನಾಗರಿಕರು ವಾಸವಾಗಿದ್ದು, ಇದರಿಂದ ಬಡಾವಣೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆಂದು ಎಂದು ತಿಳಿಸಿದ್ದಾರೆ.
ತಕ್ಷಣವೇ ಇವರನ್ನು ಬೇರೆ ಕಡರಗೆ ಸ್ಥಾಳಾಂತರಿಸಿಸಬೇಕೆಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ರಮೇಶ ಹರವಾಳ, ಪ್ರೀತಮ್ ರಾಠೋಡ್, ಅಂಬಯ್ಯ ಗುತ್ತೇದಾರ್ ಸೇರಿದಂತೆ ಮುಂತಾದವರು ಇದ್ದರು.