ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡದೆ ಸುಳ್ಳು ಬಿಲ್ಲುಗಳನ್ನು ಸೃಷ್ಟಿಮಾಡಿ, ಒಂದು ಕೆಲಸಕ್ಕೆ ಎರಡು ಬಿಲ್ ಅಂತೇ ಸೇರಿ ಲಕ್ಷ, ಲಕ್ಷ ಬಿಲ್ ಎತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಆಗಸ್ಟ್ 2019ರಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಸಿಸಿ ಕ್ಯಾಮೆರಾ ಅಳವಡಿಕೆಗೆ ರೂ, 75,750/- ಖರ್ಚು ಮಾಡಲಾಗಿದ್ದು ಮತ್ತೆ ಡಿಸೆಂಬರ್ 2019ಕ್ಕೆ ಸಿಸಿ ಕ್ಯಾಮೆರಾ ಅಳವಡಿಕೆಗೆ
ರೂ, 49,750/- ಖರ್ಚು ಮಾಡಲಾಗಿದೆ. ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಪರ್ಸಿ, ಟೇಬಲ್, ಅಲ್ಮರಿ, ಮತ್ತು ಸುಣ್ಣ-ಬಣ್ಣ ಕಾಮಗಾರಿಗಾಗಿ ಇಟ್ಟಿರುವ ರೂ, 1,22,533/- ನವಂಬರ್ 2019 ರಂದು ಖರ್ಚು ತೋರಿಸಿ ಪಂಚಾಯತ್ ಕಾರ್ಯಾಲಯಕ್ಕೆ ಬರೀ ಸುಣ್ಣ-ಬಣ್ಣ ಮತ್ತು ಪರ್ಸಿ ಮಾತ್ರ ಹಾಕಿದ್ದು ಕಂಡು ಬಂದಿದೆ, ಹಾಗೂ ಕದ್ದರ್ಗಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ನಿರ್ವಹಣೆ ಮೋಟರ್, ಕೈ ಪಂಪು ಮತ್ತು ಸ್ಟಾಟರ್ ದುರಸ್ತಿ ಕಾಮಗಾರಿಗೆ ನವಂಬರ್ 4, 2019ರಲ್ಲಿ ರೂ, 35,577/- ಖರ್ಚು ಮಾಡಲಾಗಿದೆ ಮತ್ತು ನವಂಬರ್ 13, 2019ರಂದು ರೂ, 35,577/- ಮತ್ತೆ ಖರ್ಚು ಮಾಡಲಾಗಿದೆ. ಹಾಗೂ ಫೆಬ್ರುವರಿ 4, 2020ರಂದು ರೂ, 38,800/- ಖರ್ಚು ಮಾಡಲಾಗಿದೆ ಎಂದು ತೋರಿಸಲಾಗಿದೆ ಆದರೆ ಗ್ರಾಮದಲ್ಲಿ ಒಂದೇ ಸಾರಿ ರಿಪೇರಿಯಾಗಿದೆ ಆದರೆ ಮೂರು ಬಿಲ್ ತೋರಿಸಿದ್ದಾರೆ.
ಭಾಗೋಡಿ ಗ್ರಾಮ ಪಂಚಾಯತನ ಅವ್ಯವಹಾರದ ಕುರಿತು ನೋಡಲ್ ಅಧಿಕಾರಿ ಅವರನ್ನು ಕಳುಹಿಸಿ ಬಂದ ವರದಿಯನ್ನು ಪರಿಶೀಲಿಸಿ ಜಿಲ್ಲಾ ಪಂಚಾಯತ್ ಸಿಇಓ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುತ್ತದೆ. –ಅನಿತಾ ಕೆ, ತಾಲೂಕು ಪಂಚಾಯತ್ ಇಓ.
ಹೀಗೆ ಗ್ರಾಮ ಪಂಚಾಯಿತಿಯಲ್ಲಿ ಅನುದಾನವನ್ನು ಮನಸ್ಸಿಗೆ ಬಂದಂತೆ ಕರ್ಚು ಮಾಡಿ ದುರ್ಬಳಕೆ ಮಾಡಿಕೊಂಡಿರುವುದು ಪಂಚಾಯಿತಿ ದಾಖಲೆಪತ್ರಗಳಿಂದ ಕಂಡು ಬಂದಿದೆ. ಹೀಗಾಗಿ ಗ್ರಾಮ ಪಂಚಾಯತಿ ಪಿಡಿಒ ಮತ್ತು ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಿಂದ್ರ ಅರಣಕಲ್, ಗಣಪತರಾವ ನಾಯಕ್, ಪ್ರದೀಪ್ ಪೂಜಾರಿ, ಗ್ರಾ ಪಂ ಸದಸ್ಯ ಮಂಜುನಾಥ್ ಪೂಜಾರಿ, ಶಿವಕುಮಾರ್ ರಟಕಲ್, ಇದ್ದರು.