ಬಾಹ್ಯಾವಾಗಿ ಎಲ್ಲರು ಸುಂದರವಾಗಿ ಕಂಡರು ಆಂತರಿಕವಾಗಿ ಟೊಳ್ಳಾಗಿರುವದು ಸುಳ್ಳಲ್ಲ, ಬದುಕಿನ ರೀತಿಗೆ ಹೊಂದಾಣಿಕೆ ಇಲ್ಲ , ಎಲ್ಲವೂ ನಟನೆ ಮಾಡುವವರೇ , ನಟನೆಯ ಸಾಮರ್ಥ್ಯದಿಂದ ಸೈ ಎನಿಸಿಕೊಳ್ಳುವವರನ್ನು ಏನೆನ್ನಬೇಕು????
12ನೆಯ ಶತಮಾನದ ಶರಣರು ಇಂಥ ದ್ವಂದ ಮನೋಭಾವನೆ , ಮೈಗೂಡಿಸಿ ಕೊಂಡವರಲ್ಲ, ತಮಗನಿಸಿದ್ದು ಸ್ಪಷ್ಟವಾಗಿ ನೇರವಾಗಿ, ನಿಷ್ಟುರವಾಗಿ ಹೇಳುವ ಗಟ್ಟಿತನ ಮೈಗೂಡಿಸಿ ಕೊಂಡವರು.
ಬಸವ ಪರಂಪರೆ ಎನ್ನು ಮೆಚ್ಚುವರು, ಎಂದಿಗೂ ಆತ್ಮ ವಂಚನೆ ಮಾಡಿಕೊಳ್ಳದೆ ಬದುಕನ್ನು ಕಟ್ಟಿ ಕೊಳ್ಳುವ ಪ್ರಾಮಾಣಿಕತೆಗೆ ಪ್ರಯತ್ನ ಮಾಡಬೇಕು! ಹೇಳುವದು ಒಂದು, ಮಾಡುವದು ಇನ್ನೊಂದು ! ಇದು ಬಸವ ಪರಂಪರೆ ಅಲ್ಲ! ಆತ್ಮವಂಚನೆ ಎಂದಿಗೂ ಹೊರಗಿನವರಿಗೆ ಕಾಣುವಂಥದಲ್ಲ! ನನ್ನೊಳಗೆ ನಾನು ನೋಡಿಕೊಂಡಗ ಅದರ ಸ್ವರೂಪ ಗೊತ್ತಾಗುತ್ತದೆ, ಎಷ್ಟೇ ಬಸವ ಜಯಂತಿ ಆಚರಿಸಿದರು ಆತ್ಮ ವಂಚನೆ ಮಾಡಿಕೊಳ್ಳದೆ ತನ್ನ ಅರಿವನ್ನು ಜಾಗೃತಿಸಿ ಕೊಂಡಾಗ ಬಸವಾದಿ ಶರಣರ ತ್ಯಾಗಕ್ಕೆ ಒಂದು ಕಳೆ ಬಂದಂತಾಗುವದು, ಮನಸ್ಸೇ ಮಾನವನ ಅವನತಿಗೆ, ಉನ್ನತಿಗೆ ಕಾರಾಣ, ಬೆಳಕು ಆಗುತ್ತಲೇ ಮನುಷ್ಯ ಏನೆಲ್ಲ ವ್ಯೆವಹಾರಗಳನ್ನು ಮಾಡುತ್ತಾನೆ, ಅದರಲ್ಲಿ ಪ್ರಾಮಾಣಿಕತೆ ಇರಬಹುದು , ಇಲ್ಲದಿರಬಹುದು , ಅದಕೆಲ್ಲ ಮನಸ್ಸೇ ಕಾರಣ!.
ಏನಾದರೂ ಸತ್ಕಾರ್ಯ ಮಾಡಬೇಕಾದರೆ ಆತ್ಮತೃಪ್ತಿ ಗಾಗಿ ಮಾಡಿ, ಬೀದಿ ಬೀದಿಗೆ ಹೊಸ ಹೊಸ ದೇವಸ್ಥಾನ ಹುಟ್ಟಿಕೊಳ್ಳುವ ಬದಲು ಅನಾಥ ವ್ರಧರಿಗೊ ಮಕ್ಕಳಿಗೂ ಆಶ್ರಮ ಕಟ್ಟಿದ್ದರೆ , ಇವತ್ತು ಹಸಿವೆ ಇಂದ ಬಳಲುವ ಹೊಟ್ಟೆಗಳು ಕಡಿಮೆ ಮಟ್ಟದಲ್ಲಿ ನೋಡುತ್ತಿದ್ದೆವು , ಬದುಕುವದು ಮಾತ್ರವಲ್ಲ, ಜನರನ್ನು ದಿಕ್ಕು ತಪ್ಪಿಸುವ ಮೂಢ ಮತಿಗಳ ಬಗ್ಗೆ ಈಗಲಾದರೂ ಎಚ್ಚರಿಕೆ ಇರಲಿ, ತನ್ನ ಬಿಟ್ಟು ಯಾವ ದೇವರಿಲ್ಲ ಮಣ್ಣು ಬಿಟ್ಟು ಮಡಿಕೆ ಇಲ್ಲ ಅನ್ನೋ ಸತ್ಯ ಗೊತ್ತಾಗಬೇಕು , ಎಲ್ಲಿ ನೋಡಿದರಲ್ಲಿ ಆಡಂಬರ. ಸತ್ಯ ಎಲ್ಲಿದೆ ??? ಎಂಬುದನ್ನು ದಯವಿಟ್ಟು ಗಮನಿಸಿ.