- ಶಪೀಕ್ ಊಡಗಿ
ಮುಸ್ಲಿಂ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು ರಂಜಾನ್ ಆಚರಿಸಲಾಗುವುದು ಅದರಂತೆ ಇಂದಿನಿಂದ ಭಾರತದಲ್ಲಿ ರಂಜಾನ್ ಆಚರಣೆ ಆರಂಭವಾಗಿದೆ ವರ್ಷಕ್ಕೊಮ್ಮೆ ಬರುವ ರಂಜಾನ್ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬದ ಪ್ರಯುಕ್ತ ಒಂದು ತಿಂಗಳು ಕಠಿಣ ಉಪವಾಸ ಇರುವ ಬಾಂಧವರು ಈ ಸಮಯದಲ್ಲಿ ಬಡವರಿಗೆ ದಾನ ಧರ್ಮ ಮಾಡೋದು ಪ್ರತೀತಿ.
ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರೋಜಾ ಆಚರಣೆ ಮಾಡುತ್ತಾರೆ.ಅನಾಥರು, ದುರ್ಬಲರ ಕಷ್ಟ ಕಾರ್ಪಣ್ಯಗಳ ಮನವರಿಕೆ ಮಾಡುವುದು ಉಪವಾಸದ ಉದ್ದೇಶ. ನಿತ್ಯವೂ ಐದು ಬಾರಿ ಮಸೀದಿಗೆ ತೆರಳಿ ಪಾರ್ಥನೆ ಸಲ್ಲಿಸುತ್ತಾರೆ. ಅದ್ದರೆ ಕರೋನಾ ಮಹಾಮರಿಯಿಂದ ಇಡೀ ದೇಶವೇ ತತ್ತರಿಸಿದೆ ಮಾರಣಾಂತಿಕ ಕೊರೊನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ನಿಯಂತ್ರಣ ಸವಾಲಾಗಿ ಮನೆಯಲ್ಲಿ ಇದ್ದು ರೋಜಾ (ಉಪವಾಸ) ,ನಮಾಜ್,ಇಪ್ತಾರ ಮತ್ತು ಸಮಾಜಿಕ ಅಂತರ ಕಾಯ್ದುಕೊಂಡು ಇರಬೇಕು ಎಂದು ಮಿಲ್ಲಿ ಕೌನ್ಸಿಲ್ ಅದ್ಯಕ್ಷ ಸಾಜಿದ್ ಖಾನ್ ಮುಸ್ಲಿಂ ಜನರಲ್ಲಿ ಮನವಿ ಮಾಡಿಕೊಂಡರು.