ಕಲಬುರಗಿ: ನಾಳೆ ಬಸವ ಜಯಂತಿಯ ಪ್ರಯುಕ್ತ ಮಹಾಸಭೆಯ ವತಿಯಿಂದ ಜಗತ್ ವೃತ್ತ ದಲ್ಲಿರುವ ಬಸವೇಶ್ವರ ಪುತ್ಥಳಿಯ ಆವರಣವನ್ನು ಸ್ವಚ್ಛಗೊಳಿಸ ಲಾಯಿತು.
ಅದಲ್ಲದೆ ಜಿಲ್ಲಾಡಳಿತದ ನೇತೃತ್ವದಲ್ಲಿ ನಾಳೆ ನಡೆಯುವ ಬಸವೇಶ್ವರ ಜಯಂತಿ ಉತ್ಸವವನ್ನು ಅತಿ ಸರಳ ರೂಪದಲ್ಲಿ ಆಚರಿಸುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾಜಿ ಮಹಾಪೌರರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಆದ ಶರಣಕುಮಾರ ಮೋದಿಯವರು ಚರ್ಚಿಸಿದರು.
ಅದಲ್ಲದೆ ಸಾಂಕೇತಿಕವಾಗಿ ಪುಷ್ಪಾರ್ಚನೆ ಮಾಡಲು ಬಸವೇಶ್ವರ ಪುತ್ಥಳಿ ಹಾಗೂ ಧ್ವಜವನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು ಈ ಮೂಲಕ ಎಲ್ಲಾ ಬಸವ ಅಭಿಮಾನಿಗಳು ಮತ್ತು ಬಸವ ಭಕ್ತರ ರಲ್ಲಿ ನಾಳೆ ಜಗತ್ ವೃತ್ತದಲ್ಲಿ ಜನ ಸೇರದೆ ತಮ್ಮ ತಮ್ಮ ಮನೆಗಳಲ್ಲಿ ಸರಳ ರೂಪದಲ್ಲಿ ಜಯಂತಿ ಆಚರಿಸುವ ಮೂಲಕ ಆದರ್ಶವನ್ನು ಮೆರೆಯಬೇಕೆಂದು ಮನವಿ ಮಾಡಿಕೊಂಡರು ಈ ಸಮಯದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಡಾಕ್ಟರ್ ಶರಣ್ ಬಿ ಪಾಟೀಲ್, ಪ್ರಶಾಂತ್ ಗುಡ್ಡ ಸಿದ್ದು ಪಾಟೀಲ್, ಅಣವೀರ ಪಾಟೀಲ್, ಶಂಭು ಪಾಟೀಲ್ ಬಳಬಟ್ಟಿ ಉಪಸ್ಥಿತರಿದ್ದರು.