ಇಂದು ಇಡೀ ಜಗತ್ತೇ ಕಲಿಯುತ್ತಿರುವ ಪಾಠ ಅಂದಿನ ಶರಣರ ನಡೆ – ನುಡಿ: ಶಿವರಾಜ ಅಂಡಗಿ

0
67
ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ವಿದ್ಯಾನಗರದ ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ವತಿಯಿಂದ ಬಸವೇಶ್ವರ ಜಯಂತಿ ನಿಮಿತ್ತ ವಿಶೇಷ ಕಾರ್ಯಕ್ರಮ ಶರಣು – ಶರರ್ಣಾಥಿ ( ಅಂತರದಿಂದ ನಮ್ಮಸ್ಕಾರ ) ಅಭಿಯಾನ ಕಾರ್ಯಕ್ರಮ ಹಮಿಕೂಳ್ಳಲಾಯಿತ್ತು.
ಪ್ರಪಂಚದಲ್ಲಿ ಪ್ರತಿ ಒಬ್ಬ ರಿಂದಲೂ ಒಂದು ಪಾಠ ಕಲಿಯುತ್ತಿವೆ ಎಂಬುದಕ್ಕೆ ವಿಶ್ವ ಗುರು ಬಸವಣ್ಣನವರೇ ಸಾಕ್ಷಿ. ಅವರೇ ಹೇಳುವಂತೆ ಎಲ್ಲಾ ಶಿವಶರಣರಿಂದ ಭಕ್ತಿ ರಭಸವನ್ನು ಸ್ವೀಕರಿಸಿದ್ದೆನೆ ಎಂದ ಅವರು ಶರಣ ಹರಳಯ್ಯ ದಂಪತಿಗಳ ಒಂದು ಸಾರಿ ಶರಣು ಎಂದರೆ ಸ್ವತಃ ಬಸವಣ್ಣನವರ ಅವರಿಗೆ ಮರಳಿ ಎರಡೂ ಸಾರಿ ಶರಣು – ಶರರ್ಣಾಥಿ ಎಂದ್ದಿದ್ದಕ್ಕೆ ಹರಳಯ್ಯ ದಂಪತಿಗಳು ತಮ್ಮ ಚರ್ಮದಿಂದ ಬಸವಣ್ಣನವರಿಗೆ ಪಾದುಕೆಗಳು ಮಾಡಿ ಸರ್ಮಪಿಸಿದ್ದು ಇಂತಹ ಶರಣ ಸಂಸ್ಕೃತಿಯ ಪಾಠ  ಇವತ್ತು ಇಡೀ ಜಗತ್ತೇ ಅನುಸರಿಸುತ್ತಿದೆ.
ಅನೇಕ ರಾಷ್ಟಗಳು ಭಾರತ ದೇಶದ ಸಂಸ್ಕೃತಿ  ಯೋಗ, ಆಹಾರ, ಊಡಿಗೆ ತೊಡಿಗೆ ಆಚರಿಸಿ ಅನುಭವಿಸುತ್ತಿವೆ ಎಂದರೆ ತಪ್ಪಾಗಲಾರದು ಎಂದು ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ  ಶಿವರಾಜ ಅಂಡಗಿ ಮಾತನಾಡಿದರು.
ಲಾಕ್ ಡೌನ್ ಪ್ರಯುಕ್ತ ಮನೆಯಲ್ಲಿಯೇ ಪ್ರತಿಷ್ಠಾನದ ಕೆಲವು ಸದಸ್ಯರು ಸರ್ಕಾರದ ಆದೇಶದಂತೆ ಮಾಸ್ಕಧರಿಸಿ  ಮಾಹಾಮಾರಿ ಕೊರೊನಾ ವ್ಯೆರಸ್ ತಡೆಗಟ್ಟಲು  ನಮಗೆ ಯಾರಾದರೂ ನಮಸ್ಕಾರ ಎಂದರೆ ಅವರಿಗೆ ಕೈ ಕೊಡುವುದ ಬಿಟ್ಟು ಅಂತರದಿಂದಲೆ ನಮಸ್ಕಾರ ಹೇಳುವ ಮೂಲಕ ವ್ಯೆರಸ್ ಹರಡದಂತೆ ಮುಂಜಾಗ್ರತೆ ವಹಿಸಬೆಕೇಂದು ಎಲ್ಲರೂ ದೂರದಿಂದಲೇ ನಮಸ್ಕಾರಿಸಿ “ನಮಸ್ಕಾರ” ಅಭಿಯಾನ ಹಮ್ಮಿಕೊಳ್ಳಲಾಯಿತ್ತು.
ವಚನೊತ್ಸವ ಪ್ರತಿಷ್ಠಾನದ ಯುವ ಘಟಕದ ಪಧಾದಿಕಾರಿಗಳಾದ ಸಂಗಮೇಶ ಕರಡಿ, ರಾಜಶೇಖರ ಮರಪಳ್ಲಿ, ಪೊ.  ಧೂಳಪ್ಪ ಹೂಗಾರ, ಪೊ. ಸಿದ್ದು ಶ್ರೀಚಂದ, ಡಾ.ಅರವಿಂದ ಕರಡಿ, ಶಿವಶರಣ ಪಾಟೀಲ,ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here