ಮೂರು ತಿಂಗಳ ಪಿ.ಎಫ್ ವಂತಿಗೆಯನ್ನು ಕೇಂದ್ರ ಸರಕಾರವೇ ಭರಿಸುವುದು: ಸುಪ್ರತಿಕ ದಾಶ

0
32

ಕಲಬುರಗಿ: ಒಂದು ನೂರು ಅಥವಾ ಅದಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಾರ್ಖಾನೆ ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಪಿ.ಎಪ್ ವಂತಿಗೆಯನ್ನು ಕೇಂದ್ರ ಸರಕಾರವೇ ಭರಿಸಲಿದೆ ಎಂದು ಕಲಬುರಗಿ ಪ್ರಾದೇಶಿಕ ಪಿ.ಎಪ್ ಕಚೇರಿ ಸಹಾಯಕ ಆಯುಕ್ತ ಸುಪ್ರತಿಕ ದಾಶ ತಿಳಿಸಿದ್ದಾರೆ.

90 ಪ್ರತಿಶತ ಉದ್ಯೋಗಿಗಳ ತಿಂಗಳ ವೇತನ 15,000/- ರೂ. ಗಿಂತ ಕಡಿಮೆ ಇರಬೇಕು, 100 ಪ್ರತಿಶತ ಉದ್ಯೋಗಿಗಳ ಕೆ.ವೈ.ಸಿ (KYC-Aadhar) ಮತ್ತು ಉದ್ಯೋಗದಾತರ ಪೂರ್ಣ ಮಾಹಿತಿ ಎಲೆಕ್ಟ್ರಾನಿಕ್ ಮುಖಾಂತರ (ಪಾರ್ಮ- 5ಎ) ನಮೂದಿಸಿರಬೇಕು. ಇಂತಹ ಉದ್ಯೋಗಿಗಳ ವೇತನದ ಶೇ. 24 ರಷ್ಟು ಪಿ.ಎಪ್ ವಂತಿಗೆಯನ್ನು ಕೇಂದ್ರ ಸರಕಾರ ಮೂರು ತಿಂಗಳವರೆಗೆ ಪಾವತಿಸಲಿದೆ.

Contact Your\'s Advertisement; 9902492681

ಪರಿಹಾರ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳನ್ನು ಒಳಗೊಂಡ ತಂತ್ರಾಂಶವನ್ನು ಇಪಿಎಪ್ಓ ಎಲೆಕ್ಟ್ರಾನಿಕ್ ಚಲನ್-ಕಮ್-ರಿಟರ್ನ (ಇ.ಸಿ.ಆರ್) ವ್ಯವಸ್ಥೆ ಜಾರಿಗೊಳಿಸಿದ್ದು. ಈ ವ್ಯವಸ್ಥೆಯು ಸಂಬಂಧಪಟ್ಟ ಕಾರ್ಖಾನೆಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಪರಿಹಾರವನ್ನು ಪಡೆಯಲು ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಇ.ಪಿ.ಎಪ್.ಓ ಕೋವಿಡ-19 ಟ್ಯಾಬ್‌ನಲ್ಲಿ ಗಮನಿಸಬಹುದು ಎಂದು ತಿಳಿಸಿದ್ದಾರೆ.

ಈಗಾಗಲೇ ಭವಿಷ್ಯ ನಿಧಿ ಕಚೇರಿಯ ಮುಖಾಂತರ ಅರ್ಹ ಉದ್ಯೋಗದಾತರಿಗೆ ಇ-ಮೇಲ್ ಮೂಲಕ ಸಂದೇಶವನ್ನು ರವಾನಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕಾರ್ಯಾಲಯದ ದೂರವಾಣಿ ಸಂಖ್ಯೆ 08472-283204/273205 ಮತ್ತು ಇ-ಮೇಲ್ ro.gulbarga@epfindia.gov.in   ಸಂಪರ್ಕಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here