ಉಜ್ವಲ್ ಯೋಜನೆಯ ಎಲ್ಲ ಗ್ರಾಹಕರಿಗೆ ಉಚಿತವಾಗಿ ಸಿಲಿಂಡರ್ ವಿತರಣೆ

0
31

ಕಲಬುರಗಿ: ಭಾರತ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಯಡಿ ಎಲ್ಲ ಉಜ್ವಲ ಯೋಜನೆಯ ಗ್ರಾಹಕರಿಗೆ 2020ರ ಏಪ್ರಿಲ್‍ದಿಂದ ಜೂನ್ ಮಾಹೆಯವರೆಗೆ (ಮೂರು ತಿಂಗಳು ಕಾಲ) 14.2 ಕೆ.ಜಿ.ಯ 3 ಸಿಲಿಂಡರ್ ಅಥವಾ 5 ಕೆ.ಜಿ.ಯ ಎಂಟು ಸಿಲಿಂಡರ್‍ಗಳನ್ನು ಉಚಿತವಾಗಿ ನೀಡುತ್ತಿದೆ. ಉಜ್ವಲ ಯೋಜನೆಯ ಅರ್ಹ ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.

ಉಜ್ವಲ ಯೋಜನೆಯ ಗ್ರಾಹಕರು ಏಪ್ರಿಲ್ ಮಾಹೆಯಲ್ಲಿ ಐವಿಆರ್‍ಎಸ್/ ಎಸ್‍ಎಂಎಸ್ ಮೂಲಕ ಸಿಲಿಂಡರ್‍ಗಳನ್ನು ಬುಕ್ ಮಾಡಬೇಕು. ಏಪ್ರಿಲ್ ಮಾಹೆಯಲ್ಲಿ ಸಿಲಿಂಡರ್ ಬುಕ್ ಮಾಡದೇ ಇರುವ ಗ್ರಾಹಕರು ಮೇ ಮತ್ತು ಜೂನ್ ಮಾಹೆಗಳಿಗೆ (ಪಿ.ಎಂ.ಕೆ.ವೈ.) ಅಡಿ ಸಿಲಿಂಡರ್ ಪಡೆಯಲು ಅರ್ಹರಿರುವುದಿಲ್ಲ. ಸಿಲಿಂಡರ್ ಸ್ವೀಕರಿಸಿದ ನಂತರ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರದಿಂದ ಜಮಾ ಆಗಿರುವ ಆರ್.ಎಸ್.ಪಿ. ಮೊತ್ತವನ್ನು ಪಾವತಿಸಬೇಕು. ಮರುಭರ್ತಿ ಸಿಲಿಂಡರ್‍ಗಳನ್ನು ಗ್ರಾಹಕರ ಮನೆಗೆ ಮಾತ್ರ ವಿತರಿಸಲಾಗುತ್ತದೆ. ಯಾರೂ ವಿತರಕರ ಬಳಿ ಹೋಗುವ ಅವಶ್ಯತೆ ಇರುವುದಿಲ್ಲ. ಪ್ರಸಕ್ತ ಕೋವಿಡ್-19 ದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದರ ಪ್ರಕ್ರಿಯೆಗಳನ್ನು ಸರಳ ಮತ್ತು ಸುಲಭಗೊಳಿಸಲಾಗಿದೆ.

Contact Your\'s Advertisement; 9902492681

ಸಿಲಿಂಡರ್‍ನ ನಗದು ಮೆಮೋದಲ್ಲಿಯೇ ಮರು ಭರ್ತಿ ಸಿಲಿಂಡರ್ ಸ್ವೀಕೃತಿಯನ್ನು ಸೇರಿಸಲಾಗಿದೆ. ಯಾವುದೇ ದೂರವಾಣಿ ಸಂಖ್ಯೆಯಿಂದ ಐವಿಆರ್‍ಎಸ್ ಮೂಲಕ ಮತ್ತು ವಾಟ್ಸಾಪ್/ಆನ್‍ಲೈನ್ ಮತ್ತಿತರ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದಾಗಿದೆ. ಉಜ್ವಲ ಉಚಿತ ಮರುಭರ್ತಿ ಸಿಲಿಂಡರ್ ಯೋಜನೆಯಡಿ ಪ್ರಯೋಜನ ಪಡೆಯಲು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ದಾಖಲೆ ಅಥವಾ ಪ್ರತಿಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ.
ಬ್ಯಾಂಕ್ ಖಾತೆ ಬದಲಾವಣೆ, ಮತ್ತಿತರ ಇದ್ದಲ್ಲಿ ಗ್ರಾಹಕರು ಸಂಬಂಧಪಟ್ಟ ಅಡುಗೆ ಅನಿಲ ವಿತರಕರನ್ನು ಸಂಪರ್ಕಿಸಬೇಕು. ನಕಲು ಪ್ರತಿ ಯಂತ್ರಗಳ ಸಮಸ್ಯೆ ಇದ್ದಲ್ಲಿ ವಿತರಕರು ಡಿಜಿಟಲ್ ಅಥವಾ ತಮ್ಮ ಸ್ವಂತ ಕಾಫಿಯರ್, ಎಂ.ಸಿ ಕಾಫಿಯರ್ ಮೂಲಕ ನೆರವಾಗುತ್ತಾರೆ. ಯಾವುದೇ ಸ್ಪಷ್ಟೀಕರಣ/ನೆರವಿಗೆ ತಮ್ಮ ಸಮೀಪದ ವಿತರಕರನ್ನು ಸಂಪರ್ಕಿಸಬೇಕು.

ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಹಕರು ವಿತರಕರ ಬಳಿಗೆ ಖುದ್ದು ಹೋಗುವುದನ್ನು ತಪ್ಪಿಸಿ ಫೋನ್ ಮೂಲಕ ಸಂಪರ್ಕಿಸಬೇಕು. ಯಾವುದೇ ವಿಶೇಷ ಸಂದರ್ಭಗಳಲ್ಲಿ ವಿತರಕರ ಶೋ ರೂಂಗೆ ಭೇಟಿ ನೀಡಬೇಕಾದ್ದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here