ವೈದ್ಯರ ಸಲಹೆ ಪಡೆಯದೇ ಔಷಧಿ ಖರೀದಿಸುವವರ ಮಾಹಿತಿ ಪಡೆಯಲು ನೋಡಲ್ ಅಧಿಕಾರಿ ನೇಮಕ

0
46

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ವೈರಸ್ (ಕೋವಿಡ್-19) ಹರಡುವಿಕೆಯನ್ನು ತಡೆಗಟ್ಟಲು ಅನುಕೂಲವಾಗುವಂತೆ ಮುನ್ನೇಚ್ಚರಿಕೆಯ ಕ್ರಮವಾಗಿ ವೈದ್ಯರ ಶಿಫಾರಸ್ಸು ಇಲ್ಲದೇ ಮೆಡಿಕಲ್ ಸ್ಟೋರ್ಸ್‍ಗಳಿಂದ (Antibiotics, Antipyreties and Anti Fever) ಔಷಧಿ ಖರೀದಿಸುವ ಸಾರ್ವಜನಿಕರ ಮಾಹಿತಿ ಪಡೆಯಲು ತಲಾ ಓರ್ವ ನೋಡಲ್ ಅಧಿಕಾರಿ ಹಾಗೂ ಸಹಾಯಕ ನೋಡಲ್ ಅಧಿಕಾರಿಯನÀ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಸಂಗಪ್ಪ ಗಾರಂಪಳ್ಳಿ ಇವರನ್ನು ನೋಡಲ್ ಅಧಿಕಾರಿಗಳೆಂದು ಹಾಗೂ ಪ್ರಾಧಿಕಾರದ ವ್ಯವಸ್ಥಾಪಕ ರವೀಂದ್ರರೆಡ್ಡಿ ಇವರನ್ನು ಸಹಾಯಕ ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಿ ಡಿ.ಸಿ. ಅವರು ಹೊರಡಿಸಲಾಗಿದೆ. ನೇಮಕ ಮಾಡಲಾದ ನೋಡಲ್ ಅಧಿಕಾರಿ ಪ್ರತಿ ಔಷಧ ಅಂಗಡಿಗಳಿಂದ (Antibiotics, Antipyreties and Anti Fever) ಔಷಧಿ ಖರೀದಿಸುವ ಸಾರ್ವಜನಿಕರ ವಿವರಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಆಯಾ ತಾಲೂಕಿನ ತಹಶೀಲ್ದಾರರಿಂದ ಹಾಗೂ ಕಲಬುರಗಿ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ಔಷಧ ನಿಯಂತ್ರಕರು-01 ಹಾಗೂ 02 ಇವರಿಂದ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆದು ಕ್ರೋಢೀಕರಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Contact Your\'s Advertisement; 9902492681

ಸಾಂಕ್ರಾಮಿಕ ರೋಗ ಕಾಯ್ದೆ 1897, ಕರ್ನಾಟಕ ಕೋವಿಡ್-19 ರೆಗ್ಯುಲೇಶನ್ ಉಪ ಕಲಂ (24) 2020 ನಿಯಮ 12ರಲ್ಲಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 25, 26 ಮತ್ತು 30 ರಡಿ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 133ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಿ.ಸಿ. ಅವರು ಈ ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here