ಅಬಕಾರಿ ದಾಳಿ: ರೂ. 5000 ಮೌಲ್ಯದ ಸರಾಯಿ ಜಪ್ತಿಪಡಿಸಿ ಪ್ರಕರಣ ದಾಖಲು

0
30

ಕಲಬುರಗಿ: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಾಗಿ ಕಲಬುರಗಿ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ ನೇತೃತ್ವದಲ್ಲಿ ವಲಯ ನಂ.1ರ ಅಬಕಾರಿ ನಿರೀಕ್ಷಕರ ಸಿಬ್ಬಂದಿಯೊಂದಿಗೆ ಸೋಮವಾರ ಪಾಳಾ ತಾಂಡಾದ ವ್ಯಾಪ್ತಿಯಲ್ಲಿರುವ ಮಲಾಯಿ ತಾಂಡಾದ ಹೊಲಗಳಲ್ಲಿ ಧಾರಾಸಿಂಗ್ ಠಾಕೂರ ಪವಾರ ಎಂಬುವರ ಹೊಲದಲ್ಲಿ ದಾಳಿ ನಡೆಸಿ ಒಟ್ಟು 5,000 ಮೌಲ್ಯದ 150 ಲೀ. ಬೆಲ್ಲದ ಕೊಳೆ ಹಾಗೂ 200 ಲೀ. ಕಳ್ಳಭಟ್ಟಿ ಸಾರಾಯಿಯನ್ನು ಜಪ್ತಿಪಡಿಸಿ ಕಲಬುರಗಿ ವಲಯ ನಂ. 1ರ ಅಬಕಾರಿ ಉಪ ನಿರೀಕ್ಷಕ ದಾವಲಸಾಬ ಅವರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here