ಕೊರೊನಾ ತಡೆಗೆ ಸಂಘ ಸಂಸ್ಥೆಗಳು ಮುಂದೆ ಬನ್ನಿ: ತಹಸೀಲ್ದಾರ ಕುಲಕರ್ಣಿ

0
46

ಚಿಂಚೋಳಿ: ಕೊರೊನಾ ತಡೆಯುವಲ್ಲಿ ಸರ್ಕಾರದೊಡಗೂಡಿ ಸ್ವಯಂ ಸೇವಕರಾಗಿ ಸಹಕರಿಸಲು ಸಂಘ, ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಇಂದು ಚಿಂಚೋಳಿಯ ತಹಸಿಲ್ದಾರ್ ಅರುಣಕುಮಾರ ಕುಲಕರ್ಣಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಕರೆದ ಮಹಾಮಾರಿ ಕೊರೊನಾ ದಿನದಿನಕ್ಕೆ ತನ್ನ ಅಟ್ಟಹಾಸ ಮೆರೆದು ಮಾನವ ಜನಾಂಗಕ್ಕೆ ನಡುಕ ಹುಟ್ಟಿಸಿದೆ ಇದನ್ನು ತಡೆಯುವಲ್ಲಿ ಸರ್ಕಾರ ಅಧಿಕಾರಿಗಳು ಹಗಲಿರುಳೆನ್ನದೆ ಸೇವೆ ಸಲ್ಲಿಸುತ್ತಿದ್ದಾರೆ ಅದರೊಂದಿಗೆ ಸರ್ಕಾರೆತರ ಸಂಘ, ಸಂಸ್ಥೆಗಳು ಸರ್ಕಾರದ ಅನುದಾನವಲ್ಲದೆ ಇಂತಹ ಮಹಾಮಾರಿ ಕೊರೊನಾ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಿತರಾಗಿ ಸರ್ಕಾರದೊಂದಿಗೆ ಕೈಜೋಡಿಸಿ ಸೇವೆ ಮಾಡಿ ಮಾನವೀಯತೆ ಮೆರೆಯಬೇಕೆಂದು ಮನವಿ ಮಾಡಿ, ಕೈ ಜೊಡಿಸಲು ಸರ್ಕಾರದ ವೆಬ್ ಸೈಟ್ www.karnatakafightscorona.org ನಲ್ಲಿ ತಮ್ಮ ಸಂಘ, ಸಂಸ್ಥೆಗಳ ನೊಂದಣಿ ಮಾಡಬೇಕೆಂದು ತಿಳಿಸಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಪ್ರಭಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರೇಮಿಳಾ, ಸಂಸ್ಥೆಗಳ ಮುಖಂಡರಾದ ಮಾರುತಿ ಗಂಜಗಿರಿ, ಶಾಮರೆಡ್ಡಿ ಸುಲೇಪೇಟ್, ಶಿವುಕುಮಾರ ಕೊಳ್ಳುರ, ಅಬ್ದುಲ್ ಹಾಫಜ್, ಶುಕುರ್ ಪಟೇಲ್, ರಾಜಕುಮಾರ ಕೊಳ್ಳುರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here