ನವದೆಹಲಿ: ಆನ್ ಲೈನ್ ಶಾಪಿಂಗ್ ಕಂಪನಿಗಳು ಭಾರತಕ್ಕೆ ಲಗ್ಗೆ ಇಟ್ಟಿರುವ ಸಾವಿರಾರು ಕಂಪನಿಯ ಪಟ್ಟಿಯಲ್ಲಿ ಪ್ರಮುಖ ಕಂಪನಿಯಾದ ಅಮೆಝಾನ್ ಮಾರುಕಟ್ಟೆ ಕಂಪನಿ ತನ್ನ ವೆಬ್ ಸೈಟ್ ನಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಕಂಪನಿಯ ವಿರುದ್ಧ ನವದೆಹಲಿಯ ನೋಯ್ಡಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಮೆಝಾನ್ ಕಂಪನಿಯ ಅಮೇರಿಕಾ ವೆಬ್ ಸೈಟ್ ನಲ್ಲಿ ಟಾಯ್ಲೆಟ್ ಕವರ್ ಮತ್ತು ಹೊದಿಕೆಗಳಲ್ಲಿ ಹಿಂದೂ ದೇವರ ಚಿತ್ರವಿರುವ ಉತ್ಪನ್ನಗಳನ್ನು ಆನ್ ಲೈನ್ ಮಾರಾಟಕ್ಕೆ ಜಾಹೀರಾತು ನೀಡಿದ್ದಕ್ಕಾಗಿ, ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಜಾಲತಾಣಗಳಲ್ಲಿ ಅಮೆಝಾನ್ ಬಹಿಷ್ಕರಿಸಿ ಅಭಿಯಾನ ಆರಂಭವಾಗಿದೆ. ಪ್ರಕರಣದ ಕುರಿತು ನೋಯ್ಡ್ ದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ