ಕಲಬುರಗಿ: ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಲಾಕ್ ಡೌನ್ ದಿಂದ ಸಂಕಷ್ಟ ಎದುರಿಸುತ್ತಿರುವ ಸುಮಾರು 100 ರಿಂದ 200 ಬಡ ಕುಟುಂಬಗಳಿಗೆ ನೆರವುವಾಗುವ ನಿಟ್ಟಿನಲ್ಲಿ ಇಲ್ಲಿನ ನಗರದ ಸಹಾರ ಸಂಸ್ಥೆಯ ಆಹಾರ ಧಾನ್ಯ ಒಳಗೊಂಡಿರುವ ಪರಿಹಾರ ಕಿಟ್ ಹಂಚಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಮಸ್ತಾನ್ ಬಿರಾದಾರ ತಿಳಿಸಿದ್ದಾರೆ.
ದಿನ ನಿತ್ಯ ಬಳಕೆ ಅಗತ್ಯ ವಸ್ತುಗಳನ್ನು ಸೇರಿದಂತೆ 2500 ರೂ. ವೆಚ್ಚದ ಸಾಮಾಗ್ರಿಗಳನ್ನು ಒಳಗೊಂಡಿದೆ ಕಿಟ್ ಗಳು ತಯಾರಿಸಲಾಗಿದ್ದು, ಅಗತ್ಯ ಮತ್ತು ತೀರ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತಲುಪಿಸುವ ಉದ್ದೇಶ ಸಂಸ್ಥೆ ಹೊಂದಿದ್ದು, ಮುಂದಿನ ದಿನಗಳಲ್ಲಿ 600 ಕುಟುಂಬಗಳಿಗೆ ಈ ಪರಿಹಾರ ಕಿಟ್ ತಲುಪಿಸುವ ಉದ್ದೇಶ ಸಂಸ್ಥೆ ಹೊಂದಿದೆ ಎಂದು ಇ- ಮೀಡಿಯಾ ಲೈನ್ ಜೊತೆ ಹಂಚಿಕೊಂಡಿದ್ದಾರೆ.