ಶಾಸಕ ಪ್ರಿಯಾಂಕ್ ಖರ್ಗೆ ಅವರಿಂದ ಬಡವರಿಗೆ ದಿನಸಿ ಆಹಾರ ಕಿಟ್ ವಿತರಣೆ

0
73

ಚಿತ್ತಾಪುರ: ಕೋವಿಡ್(19) ವೈರಸ್ ತಡೆಗೆ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ಲಾಕ್ ಡೌನ್ ಜಾರಿಗೆ ಬಂದ ಪರಿಣಾಮ ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟ ಅನುಭವಿಸುತ್ತಿರುವ ಬಡಕುಟುಂಬಗಳಿಗೆ ದಿನಸಿ ಆಹಾರಕ್ಕೆ ವಿತರಿಸಿ ಶಾಸಕ ಪ್ರಿಯಾಂಕ ಖರ್ಗೆ ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದ ತಹಸಿಲ್ ಕಾರ್ಯಾಲಯದ ಆವರಣದಲ್ಲಿ
ಒಟ್ಟು 3000 ಕೀಟ್ ಗಳನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರರಿಸಿದರು. ಪ್ರತಿಯೊಂದು ಕಿಟ್ ನಲ್ಲಿ ೫ ಕೆಜಿ ಅಕ್ಕಿ, ೨ ಕೆಜಿ ಬೇಳೆ, ೧.೫೦ ಕೆಜಿ ಸಕ್ಕರೆ, ೧ ಲೀಟರ್ ಅಡುಗೆ ಎಣ್ಣೆ ಹಾಗೂ ಪುಡಿಕಾರ ಒಳಗೊಂಡಿದೆ.

Contact Your\'s Advertisement; 9902492681

ಜೊತೆಗೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪುರಸಭೆ, ಪಂಚಾಯತ ಸಿಬ್ಬಂದಿ ವರ್ಗದವರ ಉಪಯೋಗಕ್ಕಾಗಿ 700 ಮುಖ ಗವಸು, ಮತ್ತು 10 ಥರ್ಮಲ್ ಸ್ಕ್ಯಾನರ್, ಹಸ್ತಾಂತರಿಸಿದರು.

ಈ ವೇಳೆಯಲ್ಲಿ ತಹಸಿಲ್ದಾರ್ ಉಮಾಕಾಂತ್ ಹಳ್ಳೆ, ತಾಲೂಕು ಪಂಚಾಯತ್ ಇಓ ಅನಿತಾ ಪೂಜಾರಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್, ತೋಟಗಾರಿಕೆ ಇಲಾಖೆ ಅಧಿಕಾರಿ ಸಿದ್ದು, ಪುರಸಭೆ ಅಧಿಕಾರಿ ಮನೋಜ್ ಕುಮಾರ್ ಗುರಿಕಾರ್, ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಲ್ಲಾ ಪಂಚಾಯತ್ ಸದಸ್ಯ ಶಿವರುದ್ರ ಬೇಣಿ, ತಾಲೂಕು ಪಂಚಾಯತ್ ಅಧ್ಯಕ್ಷ ಜಗನಗೌಡ ಪಾಟೀಲ್, ಕಾಂಗ್ರೆಸ್ ಮುಖಂಡ ಶರಣು ಡೋಣಗಾವ್, ಮಲ್ಲಿಕಾರ್ಜುನ್ ಮುಡಳಕರ್ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here