ಶಹಾಬಾದ: ನಗರದ ಜೆಡಿಎಸ್ ಕಛೇರಿಯಲ್ಲಿ ಶುಕ್ರವಾರ ಜೆಡಿಎಸ್ ಪಕ್ಷದ ವತಿಯಿಂದ ಪೌರಕಾರ್ಮಿಕರನ್ನು ಸನ್ಮಾನಿಸುವುದರ ಮೂಲಕ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದರು.
ಜೆಡಿಎಸ್ ಅಧ್ಯಕ್ಷ ರಾಜಮಹ್ಮದ್ ರಾಜಾ ಮಾತನಾಡಿ, ಇಂದು ಕಾರ್ಮಿಕರ ಕಾಯ್ದೆಯ ಮೂಲಕ ಕಾರ್ಮಿಕರ ರಕ್ಷಣೆ ಮಾಡಬೇಕಾದ ನೀತಿ ನಿಯಮಗಳು ಬದಲಾಗುತ್ತಿವೆ. ಅಲ್ಲದೇ ಕಾರ್ಖಾನೆಯ ಮಾಲೀಕರು ದುಡಿಯುವ ವರ್ಗದ ಸವಲತ್ತುಗಳನ್ನು ಕಡಿತಗೊಳಿಸುತ್ತಿವೆ. ಇದರಿಂದ ಕಾರ್ಮಿಕರ ಕುಟುಂಬಗಳು ಸಂಕಷ್ಟದಲ್ಲಿವೆ. ಗುತ್ತಿಗೆ ಆಧಾರದ ಪದ್ದತಿಯನ್ನು ಕಡಿತಗೊಳಿಸಿ ಖಾಯಂ ಪದ್ದತಿ ಜಾರಿಯಾದಾಗ ಮಾತ್ರ ಕಾರ್ಮಿಕರಿಗೆ ನ್ಯಾಯ ದೊರಕಿತಂದಾಗುತ್ತದೆ ಎಂದು ಹೇಳಿದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ ಮಾತನಾಡಿ, ಕಾರ್ಮಿಕರ ಸಂಕಷ್ಟಗಳು ತೊಲಗಬೇಕಾದರೆ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕಾಗಿದೆ. ಈ ದೇಶಕ್ಕೆ ಬಂದ ದೊಡ್ಡ ಗಂಡಾಂತರವೆಂದರೆ ಕರೋನಾ ವೈರಸ್. ಅದನ್ನು ಎದುರಿಸಲು ಹೋರಾಟ ಗಟ್ಟಿಗೊಳಿಸಬೇಕಾಗಿದೆ.ಅದಕ್ಕೆಲ್ಲಾ ನೀವು ನಿಮ್ಮ ನಿಮ್ಮ ಮನೆಯಲ್ಲೇ ಇರಿ. ಮಾಸ್ಕ್‌ಗಳನ್ನು ಧರಿಸಿ ಈ ರೋಗವನ್ನು ತಡೆಗಟ್ಟಬಹುದು ಎಂದರು.
ಜಯಲಕ್ಷ್ಮಿ ಬಂಗರಗಿ, ಮೆಹಬೂಬ ಗೋಗಿ, ಬಸವರಾಜ ಮಯೂರ,ನವನಾಥ ಕುಸಾಳೆ, ಯೂಸುಫ್ ಸಾಹೇಬ, ಸಿದ್ದಲಿಂಗ, ಜಗನ್ನಾಥ ಸುಬೇದಾರ,ಚಾಂದ ಪಾಶಾ ಇದ್ದರು.