ಜಿಡಗಾ ಶ್ರೀಗಳಿಂದ ಉದನೂರು ಜೋಡು ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

0
103

ಕಲಬುರಗಿ: ಪ್ರತಿಯೊಬ್ಬ ಮನುಷ್ಯ ಸಿದ್ಧಿ ಪಡೆಯಲು ಪ್ರಯತ್ನ ಪಡುತ್ತಲೇ ಇರುತ್ತಾನೆ. ಸಾಧನೆ ಸಿದ್ಧಿಸಲು ಗುರುಬಲ ಮತ್ತು ದೈವಬಲದ ಅಗತ್ಯವಿದೆ ಎಂದು ಜಿಡಗಾ ಮುಗಳಖೋಡ ಮಠಾಧೀಶರಾದ ಡಾ.ಮುರುಘರಾಜೇಂದ್ರ ಸ್ವಾಮಿಗಳು ನುಡಿದರು.

ನಗರದ ಹೊರವಲಯದ ಉದನೂರು ಗ್ರಾಮದ ಜೋಡು ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ, ಆಶೀರ್ವಚನ ನೀಡಿದ ಅವರು, ಗುರುಭಕ್ತಿಯಿಂದ ದೈವಬಲ ಲಭಿಸುವುದರಲ್ಲಿ ಅನುಮಾನವಿಲ್ಲ. ಸಾಧನೆ ಬಯಸುವ ಪ್ರತಿಯೊಬ್ಬರೂ ಗುರುಭಕ್ತಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

Contact Your\'s Advertisement; 9902492681

ಸಮಾರಂಭದಲ್ಲಿ ಸಮ್ಮುಖವನ್ನು ಮಾತೋಶ್ರೀ ಸಿದ್ದಮ್ಮಾಂಬೆ ತಾಯಿ ಧುತ್ತರಗಾಂವ ವಹಿಸಿದ್ದರು. ದೇವಸ್ಥಾನ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದ್ದ ಪ್ರಮುಖರಾದ ಶಿವರಾಜ ಪೊಲೀಸ್‌ಪಾಟೀಲ, ಮಹಾದೇವಪ್ಪ ಕಪನೂರ, ಬಲಭೀಮ ಬಿರಾದಾರ, ನೀಲಕಂಠರಾವ ಪಾಟೀಲ, ಶಿವಪುತ್ರ ಮಾಲಿಪಾಟೀಲ, ಮಲ್ಲಿಕಾರ್ಜುನ ಮಾಲಿಪಾಟೀಲ, ಬಸವರಾಜ ಬಿರಾದಾರ, ಶಿವಯ್ಯ ಮಠಪತಿ, ಇತರರು ಭಾಗವಹಿಸಿದ್ದರು. ಶ್ರೀಮಠದ ಭಕ್ತ ರಾಜಕುಮಾರ ಉದನೂರ ನಿರೂಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here