ಆರೋಗ್ಯ ಸಮಸ್ಯೆ: ಕಲಬುರಗಿ ನಗರದಲ್ಲಿ ಸಾರ್ವತ್ರಿಕ ಸಮೀಕ್ಷೆ

0
44

ಕಲಬುರಗಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಇನ್ಫ್ಲೂಎಂಜಾ ಲೈಕ್ ಇಲ್‍ನೆಸ್ (IಐI), ತೀವ್ರ  ಉಸಿರಾಟಿನ ತೊಂದರೆ (SಂಖI) ಹಾಗೂ ತೀವ್ರ ರೀತಿಯ ಅರೋಗ್ಯ ಸಮಸ್ಯೆಯನ್ನು ಹೊಂದಿರುವ ರೋಗಿಗಳನ್ನು ಪತ್ತೆ ಹಚ್ಚಲು ಚುನಾವಣಾ ಮತಗಟ್ಟೆವಾರು ಸಾರ್ವತ್ರಿಕ ಸಮೀಕ್ಷೆ ಕಾರ್ಯಕ್ಕೆ ಕಲಬುರಗಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಚಾಲನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಎಲ್ಓ ಮತ್ತು ಶಿಕ್ಷಕರು ಪ್ರತಿ ಮನೆ ಬಾಗಿಲಿಗೆ ತೆರಳಿ, ೬೦ ವರ್ಷ ಮೇಲ್ಪಟ್ಟ ವರು, ಗರ್ಭಿಣಿಯರು, ಸೂಗರ್, ಬಿಪಿ ಇದ್ದವರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

Contact Your\'s Advertisement; 9902492681

ಮತದಾರರ ಪಟ್ಟಿ ಆಧಾರದ ಮೇಲೆ ಪ್ರತಿ ಮನೆಗೆ ಭೇಟಿ ನೀಡಿ ಕುಟುಂಬಗಳ ಆರೋಗ್ಯದ ಮಾಹಿತಿ ಬರೆದುಕೊಳ್ಳುತ್ತಿದ್ದು, ಸಾರ್ವಜನಿಕರು ಮನೆಗೆ ಬರುವ ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತ ಪಾಂಡ್ವೆ ಅವರು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here