ಕಲಬುರಗಿ: ಕಿಲ್ಲರ್ ಕೊರೊನಾ ಮಹಾಮಾರಿಗೆ ಕಲಬುರಗಿ ಮತ್ತೋರ್ವ 56 ವರ್ಷದ ವ್ಯಕ್ತಿ ಬಲಿಯಾಗಿದ್ದು, ಕೋವಿಡ್-19ಗೆ ಜಿಲ್ಲೆಯ ಆರನೇ ವ್ಯಕ್ತಿ ಬಲಿ ಪಡೆದಿದೆ.
ಕೆಮ್ಮು ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಇವರನ್ನು ಎಪ್ರಿಲ್ 29 ರಂದು ಆಸ್ಪತ್ರೆಗೆ ದಾಖಲಾಗಿದರು.
ಅಲ್ಲದೇ 36 ವರ್ಷದ ಮಹಿಳೆ ಹಾಗೂ ಚಿಂಚೋಳಿಯ 37 ವರ್ಷದ ವ್ಯಕ್ತಿಗಳಿಬ್ಬರಿಗೆ ಸೋಂಕು ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.
ರಾಜ್ಯದ ಒಟ್ಟು ಸೋಂಕಿತ 642 ಪ್ರಕರಣಗಳಲ್ಲಿ 304 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 26 ಮಂದಿ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.