ಶಹಾಬಾದ: ಸಮೀಪದ ಮುಗುಳನಾಗಾವಿಯ ಕಟ್ಟಿಮನಿ ಹಿರೇಮಠದ ಲಿಂ.ಸಿದ್ದಲಿಂಗ ಶಿವಾಚಾರ್ಯರ ಜಾತ್ರೆ ಹಾಗೂ ರಥೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಮಠದ ಪೀಠಾಧಿಪತಿ ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದ್ದಾರೆ.
ಮೇ.8 ರಂದು ನಡೆಯ ಬೇಕಾಗಿದ್ದ ರಥೋತ್ಸವ ಲಾಕ್ಡೌನ್. ಕಲಂ.144 ಜಾರಿ ಹಿನ್ನೇಲೆಯಲ್ಲಿ ರದ್ದುಗೊಳಿಸಿದ್ದು, ಶ್ರೀಮಠದ ಭಕ್ತರು ರಥೋತ್ಸವದಂದು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ತಮ್ಮ ಕುಟುಂಬವನ್ನು ಬಿಟ್ಟು ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು,ಆಶಾ ಕಾರ್ಯಕರ್ತರು, ವಿಜ್ಞಾನಿಗಳು ಮತ್ತು ಇತರ ಸರಕಾರಿ ಸಿಬ್ಬಂದಿ, ದೇಶ ಕಾಯುವ ಸೈನಿಕರ ಕುಟುಂಬಕ್ಕೆ ಆರೋಗ್ಯ ಭಾಗ್ಯ ನೀಡಲಿ, ಅವರ ಕುಟುಂಬ ನೆಮ್ಮದಿಯಾಗಿರಲಿ ಎಂದು ಮನೆಯಲ್ಲಿಯೇ ಪ್ರಾರ್ಥಿಸಬೇಕೆಂದು ಕರೆ ನೀಡಿದ್ದಾರೆ.