ಗುಲ್ಬರ್ಗಾ ವಿವಿಯಲ್ಲಿ ಬುದ್ಧ ಜಯಂತಿ ಆಚರಣೆ

0
29

ಕಲಬುರಗಿ: ಬುದ್ಧ ಜಗತ್ತಿನ ಮೊದಲ ಶಾಂತಿದೂತ ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದು ಹೇಳಿದ್ದಲ್ಲದೆ, ಅದಕ್ಕೆ ಪರಿಹಾರಗಳನ್ನು ಹೇಳಿದ. ಜಗತ್ತಿಗೆ ಯುದ್ಧ ಬೇಕಾಗಿಲ್ಲ ಬುದ್ಧ ಬೇಕು. ಶಾಂತಿ ಸಹಬಾಳ್ವೆ, ಸಹನೆ ಪ್ರೀತಿ ಕರುಣೆ ಪ್ರತಿಪಾದಿಸಿದ ಮಹಾ ಮಾನವ ಬುದ್ಧ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೊ. ಚಂದ್ರಕಾಂತ ಯಾತನೂರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯು ಬುದ್ಧ ಜಯಂತಿಯ ಅಂಗವಾಗಿ ಹಮ್ಮಿಕೊಂಡ ಸರಳ ಸಮಾರಂಭ ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕ ಕಲಾ ನಿಕಾಯದ ಡೀನರಾದ ಪ್ರೊ. ಎಚ್.ಟಿ. ಪೋತೆಯವರು, ಬುದ್ಧ ಯುದ್ಧವನ್ನು ವಿರೋಧಿಸಿ ಕಾಡಿಗೆ ಹೋಗಬೇಕಾಯಿತು. ಆ ಕಾಲದಲ್ಲಿ ಅಸ್ಪøಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದ್ದಲ್ಲದೆ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಪ್ರಥಮ ವ್ಯಕ್ತಿ ಬುದ್ಧ ಎಂದು ಹೇಳಿದರು.
ಸಮಾರಂಭದಲ್ಲಿ ಕುಲಸಚಿವರಾದ ಪ್ರೊ. ಸಿ. ಸೋಮಶೇಖರ್, ಕುಲಸಚಿವ (ಮೌಲ್ಯಮಾಪನ) ಪ್ರೊ. ಸಂಜೀವಕುಮಾರ್ ಕೆ, ಪ್ರೊ. ಜಗನ್ನಾಥ ಸಿಂಧೆ, ಪ್ರೊ. ಜಿ. ಶ್ರೀರಾಮಲು, ಡಾ. ಎಂ.ಎಸ್. ಪಾಸೋಡಿ, ಡಾ. ಹಣಮಂತ ಜಂಗೆ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here