ಕಲಬುರಗಿ: ರಾಜ್ಯದ ಉಪ ಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜಕಲ್ಯಾಣ ಹಾಗೂ ಜಿಲ್ಲಾಉಸ್ತುವಾರಿ ಸಚಿವಗೋವಿಂದ್ ಕಾರಜೋಳ್ ಅವರು ನಗರದಕೊರೋನಾ ಪೀಡಿತ ನಿರ್ಬಂಧಿತ ಪ್ರದೇಶ ಮುಸ್ಲಿಂ ಚೌಕ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿಕಾಂಗ್ರೆಸ್ ಹಿರಿಯಕಾರ್ಯಕರ್ತ ಆಲಂ ಮಜರ್‍ಖಾನ್‍ಅವರ ಮೇಲೆ ಹಿಟ್ಲರ್‍ರೀತಿ ದಬ್ಬಾಳಿಕೆಯ ನೀತಿಯನ್ನು ಅನುಸರಿಸಿದ್ದು ಖಂಡನೀಯಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ. ಶಾಣಪ್ಪ ಅವರು ಇಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಜರಖಾನ್ ಆಲಂ ಅವರು ಹಿರಿಯ ಕಾಂಗ್ರೆಸ್ ಕಾರ್ಯಕರ್ತ, ಒಳ್ಳೆಯ ನಾಯಕತ್ವ ಹೊಂದಿದ್ದಾರೆ. ಒಬ್ಬ ವಿರೋಧ ಪಕ್ಷದಕಾರ್ಯಕರ್ತನಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯಾವರೀತಿ ಮಾತನಾಡಬೇಕೋ ಆ ರೀತಿ ಮಾತನಾಡಿದ್ದಾರೆ. ಯಾವುದೇ ಅಸಂವಿಧಾನಿಕ ಭಾಷೆ ಬಳಸದೇ ಇದ್ದರೂ ಸಹ ಅವರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಉಪ ಮುಖ್ಯಮಂತ್ರಿಯಾಗಿ ಕಾರಜೋಳ್ ಅವರು ನಿರ್ಬಂಧಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತ ಮಜರ್‍ಖಾನ್ ಆಲಂ ಅವರಿಗೆ ಹೇಗಿದ್ದೀರಾ? ಎಂದು ರೂಢಿಗತವಾಗಿ ಕೇಳಿದ್ದಾರೆ. ಆ ಸಂದರ್ಭದಲ್ಲಿ ಈಗಾಗಲೇ ಕೊರೋನಾಕ್ಕೆ ಹೆಚ್ಚು ಸಾವು, ನೋವು ಸಂಭವಿಸಿದ್ದರಿಂದ ಸಹಜವಾಗಿಯೇ ಮಜರ ಆಲಂ ಅವರು ಅತ್ಯಂತ ನೊಂದು ಇನ್ನೂ ಜೀವಂತವಾಗಿದ್ದೇವೆ. ನೀವು ಎರಡು ಬಾರಿ ಬಂದು ಕೇವಲ ಸಭೆ ಮಾಡಿ ಹೋಗಿದ್ದೀರಿ ಎಂದು ಹೇಳಿದಾಗ, ಅದಕ್ಕೆ ಹಿರಿಯ ಮುತ್ಸದ್ದಿ ಆಗಿರುವ ಉಪ ಮುಖ್ಯಮಂತ್ರಿಗಳು ಸ್ಪಂದಿಸಬೇಕಾಗಿತ್ತು. ಅದನ್ನು ಬಿಟ್ಟು ಹೊರಗೆ ನಡೆಎಂದು ದಬ್ಬಾಳಿಕೆ ಮಾಡಿದ್ದು, ಪೋಲಿಸರು ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದು ಸರಿಯಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾರಜೋಳ್ ಅವರು ಸಾವಿರ ಸಲ ಬಂದಿದ್ದೇನೆ ಎಂದು ಸುಳ್ಳು ಹೇಳಿದ್ದು ಸಹ ಅವರ ವ್ಯಕ್ತಿತ್ವಕ್ಕೆ ಶೋಭೆತರುವುದಿಲ್ಲ. ಬಂದವರ ಸಮಸ್ಯೆಗಳಿಗೆ ಪರಿಹಾರ ನೀಡದೇ ಅವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲು ಮುಂದಾದರೆ ಅಂತಹ ಉಸ್ತುವಾರಿ ಸಚಿವರ ಅಗತ್ಯವೂ ಇಲ್ಲ ಎಂದು ಅವರು ಹೇಳಿದರು.
ಕೂಡಲೇ ಕಾರಜೋಳ್ ಅವರು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಕೂಡಲೇ ಮಜರ ಖಾನ್ ಆಲಂ ಅವರ ವಿರುದ್ಧ ಪ್ರಕರಣವನ್ನು ಬೇಶರತ್ತಾಗಿ ಹಿಂಪಡೆದು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕದ ಬೀದರ್, ಬಳ್ಳಾರಿ ಹೊರತುಪಡಿಸಿ, ರಾಯಚೂರು, ಕೊಪ್ಪಳ್, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಿಗೆ ಪ್ರಾತಿನಿಧ್ಯದೊರಕಿಲ್ಲ. ಆದ್ದರಿಂದಕೂಡಲೇ ಮುಖ್ಯಮಂತ್ರಿಗಳು ಜಿಲ್ಲೆಗೆ ಪ್ರಾತಿನಿಧ್ಯಕೊಡಲು ಜಿಲ್ಲೆಯವರನ್ನೇ ಸಂಪುಟಕ್ಕೆ ಸೇರಿಸಿಕೊಂಡು ಜಿಲ್ಲಾಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಲಾಕ್‍ಡೌನ್‍ಜಾರಿಯಲ್ಲಿದ್ದು, ರಾಜ್ಯ ಸರ್ಕಾರವು ಸಂತ್ರಸ್ತರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದು ಸ್ವಾಗತಾರ್ಹಎಂದು ಹೇಳಿದ ಅವರು, ಮದ್ಯ ಮಾರಾಟವನ್ನು ಆರಂಭಿಸಿದ್ದರಿಂದ ರಾಜ್ಯ ಸರ್ಕಾರಕ್ಕೂ ಆದಾಯ ಬಂದಿದೆ. ಇದರಿಂದ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದರು.
ನಾನು ಈ ಹಿಂದೆ 1996ರಲ್ಲಿ ಅಬಕಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ವಸಂತ್ ಬಂಗೇರಾ, ಮಾಜಿ ಸಚಿವ ದಿ. ಎಂ.ವೈ. ಘೋರ್ಪಡೆ ಸೇರಿದಂತೆ ಹಲವಾರುಗಣ್ಯರು ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯಿಸಿದರು. ಅದರಂತೆ ಅಂದಿನ ಜೆ.ಎಚ್. ಪಟೇಲ್‍ಅವರ ಸಚಿವ ಸಂಪುಟ ಸಭೆಯಲ್ಲಿ ಮದ್ಯ ಮಾರಾಟ ನಿಷೇಧ ಕೈಗೊಳ್ಳಲಾಯಿತು.
ಅದರಿಂದಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳು ನನಗೆ 1996ರ ಡಿಸೆಂಬರ್ 25ರಂದು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಕಾಕತಾಳೀಯ ಎನ್ನುವಂತೆ ನಾನು ಅಂದೇ ಸಚಿವ ಸ್ಥಾನಕ್ಕೆ ರಾಜೀನಾಮೆಕೊಟ್ಟೆ. ಹೀಗಾಗಿ ನಾನು ಅ ಸನ್ಮಾನ ಕಾರ್ಯಕ್ರಮಕ್ಕೆ ಹೋಗಲಿಲ್ಲ. ಮದ್ಯ ಮಾರಾಟ ನಿಷೇಧ ಮಾಡಿದರೂ ಸಹ ಅದನ್ನು ಮುಂದುವರೆಸಿಕೊಂಡು ಹೋಗಲು ಆಗಲಿಲ್ಲ. ಈಗ ಮತ್ತೆ ಮದ್ಯ ಮಾರಾಟಆರಂಭವಾಗಿದೆ. ಈಗ ಮತ್ತೆ ಮಠಾಧೀಶರು ಅದೇ ಆಗ್ರಹವನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.