ಸೇಡಂ: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುಲು ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಜೀವ ಮತ್ತು ಕುಟುಂಬದ ಹಂಗು ತೊರೆದು ಕಣ್ಣಿಗೆ ನಿದ್ದೆ ಇಲ್ಲದೇ ಹಗಲಿರುಳು ಕರ್ತವ್ಯ ನಿರ್ವಹಿಸಿ ಎಲ್ಲರ ಪ್ರಾಣವನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ.
ಆದರೆ ಇಲ್ಲಿನ ತಾಲ್ಲೂಕಿನ ಮುಧೋಳ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಮುಸ್ಲಿಂ ಸಮುದಾಯದ ಬಗ್ಗೆ ಜಾತಿ ನಿಂದನೆ ಮಾಡಿದ್ದಾರೆಂದು ಠಾಣೆ ವ್ಯಾಪ್ತಿಯ ನಿವಾಸಿ ಓರ್ವರು ಸಹಾಯಕ ಆಯುಕ್ತರಿಗೆ ದೂರು ನೀಡಿದ್ದಾರೆ.
ಮಹಮ್ಮದ್ ಹಸನ ಮದನಾ ಎಂಬ ವ್ಯಕ್ತಿ ಮದ್ಯ ಕುಡಿದು ಕುಡಿದು ಬಿದ್ದಿದ್ದ ರಿಂದ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕರೆದುಕೊಂಡು ಹೋಗಿದ್ದರು. ಠಾಣೆಯ ಪಿಸಿ ನಿಸಾರ್ ಅಹಮದ್ ಅವರಿಗೆ ಕರೆ ಮಾಡಿ ಹಸನ ಅವರಿಗೆ ಠಾಣೆಯಿಂದ ಕರೆದುಕೊಂಡು ಹೋಗಿ ಎಂದು ತಿಳಿಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಅಮಾಯಕರ ಜೊತೆ ನಡೆಸಿರುವ ವರ್ತನೆ ಖಂಡನೀಯವಾಗಿದೆ, ಈ ಕುರಿತು ಎಸ್.ಪಿ ಯಡಾ ಮಾರ್ಟಿನ್ ಮಾಹಿತಿ ಪಡೆದು ಕ್ರಮ ಕೈಗೋಳುವ ಭರವಸೆ ನೀಡಿದ್ದಾರೆ. – ಡಾ. ಅಜಗರ್ ಚುಲಬುಲ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ.
ಠಾಣೆಯಲ್ಲಿ ಮಹಮ್ಮದ್ ಮೋಯಿನರನ್ನು ನೋಡಿದ್ದು, ಮುಧೋಳ ಸರ್ಕಲ್ ಇನ್ಸ್‌ಪೆಕ್ಟರ್ ಅವಚ್ಯ ಶಬ್ದಗಳಿಂದ ನಿಂದಿಸಿ, ಮುಸ್ಲಿಂ ಸಮುದಾಯದಿಂದ ಕೊರೋನಾ ಮಹಾಮಾರಿ ಹಬ್ಬಿದೆ ಎಂದು ಅವಾಜ ಹಾಕಿ ಜಾತಿ ನಿಂದನೆ ಮಾಡಿದ್ದರೆ ಎಂದು ದೂರು ನೀಡಿ, ಇ-ಮೀಡಿಯಾ ಲೈನ್ ಜೊತೆ ಹಂಚಿಕೊಂಡಿದ್ದಾರೆ.