ಶಾಸಕ ಗುತ್ತೇದಾರರಿಂದ ದಿನಸಿ ಪದಾರ್ಥ ವಿತರಣೆ

0
95

ಆಳಂದ: ಶಾಸಕ ಗುತ್ತೇದಾರರಿಂದ ದಿನಸಿ ಪದಾರ್ಥ ವಿತರಣೆ ಪಟ್ಟಣದ ವಾರ್ಡ ನಂ ೭,೮,೯ರಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅವಶ್ಯವಿರುವ ೪೯೦ ಬಡ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ಹೊಂದಿರುವ ಆಹಾರ ಪೊಟ್ಟಣಗಳನ್ನು ವಿತರಿಸಿದರು.

ಪಟ್ಟಣದ ಶರಣನಗರದ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಇತ್ತೀಚಿಗೆ ಒಬ್ಬ ವ್ಯಕ್ತಿ ಕೊರೋನಾದಿಂದ ಮೃತಪಟ್ಟಿರುವುದರಿಂದ ಸುತ್ತಮುತ್ತಲಿನ ವಾರ್ಡ ನಂ ೭,೮,೯ರಲ್ಲಿ ಸಿಲಡೌನ್ ಮಾಡಲಾಗಿತ್ತು. ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರವನ್ನು ಕಾಪಾಡುವ ಸಲುವಾಗಿ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಲು ನಿರ್ಧರಿಸಿ ಇಲ್ಲಿಯವರೆಗೆ ಅಧಿಕಾರಿಗಳಿಗೆ ಸಹಾಯ ಮಾಡಲು ಸೂಚಿಸಿದ್ದೇವು ಎಂದು ಹೇಳಿದರು.

Contact Your\'s Advertisement; 9902492681

ಈಗ ಸಿಲಡೌನ್ ತೆರುವುಗೊಳಿಸಿರುವುದರಿಂದ ಜನತೆಗೆ ಸಹಾಯಹಸ್ತ ನೀಡಲಾಗುತ್ತಿದೆ. ಸರ್ಕಾರ ಮತ್ತು ನಮ್ಮ ಕಾರ್ಯಕರ್ತರು ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಮುಂದೆಯೂ ಕೂಡ ಜನತೆಯ ಜೊತೆ ಇರುತ್ತೇನೆ ಆದರೆ ಜನತೆ ಭಯ ಬೀಳಬಾರದು. ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಬರುವುದರ ಮೂಲಕ ರೋಗಿನ ವಿರುದ್ಧ ಹೋರಾಡಬೇಕು ಎಂದರು.

ಶಾಸಕರು ಪುಣೆ ನಗರದಲ್ಲಿ ವಾಸವಾಗಿರುವ ತಾಲೂಕಿನ ಕಾರ್ಮಿಕರನ್ನು ಕರೆದುಕೊಂಡು ಬರಲು ಎರಡು ಬಸಗಳನ್ನು ತಮ್ಮ ಸ್ವಂತ ಹಣದಿಂದ ಕಳುಹಿಸಿದ್ದಾರೆ. ಅದರಲ್ಲಿ ಹಲವಾರು ಜನ ಕಾರ್ಮಿಕರು ಈಗಾಗಲೇ ಬುಧುವಾರ ನಸುಕಿನ ಜಾವ ೧ ಗಂಟೆಗೆ ಆಳಂದ ಬಂದು ತಲುಪಿದ್ದಾರೆ. ಶಾಸಕರು ತಮ್ಮ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ವತಿಯಿಂದಲೂ ಬಸಗಳನ್ನು ಪುಣೆ ನಗರಕ್ಕೆ ಕಳುಹಿಸಿದ್ದಾರೆ. ಅಲ್ಲಿರುವ ಕಾರ್ಮಿಕರನ್ನು ಶೀಘ್ರವಾಗಿ ಕರೆದುಕೊಂಡು ಬರಲು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ತಹಸೀಲದಾರ ದಯಾನಂದ ಪಾಟೀಲ, ಮುಖಂಡ ಮಲ್ಲಿನಾಥ ಪರೇಣಿ, ಮಲ್ಲಣ್ಣ ನಾಗೂರೆ, ವೀರಣ್ಣ ಹತ್ತರ್ಕಿ, ಅಡವಿರಾಜ ಅತನೂರೆ, ಪುರಸಭೆ ಸದಸ್ಯರಾದ ಶ್ರೀಶೈಲ ಖಜೂರಿ, ರಾಜಕುಮಾರ ಸನ್ಮುಖ, ಮೃತ್ಯುಂಜಯ ಆಲೂರೆ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here