ಆಳಂದ: ಕೊರೋನಾ ಸಂಕಷ್ಟ, ಲಾಕಡೌನ್ ಸಮಸ್ಯೆಯಿಂದ ಸಿಲುಕಿಕೊಂಡಿರುವ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಪ್ಯಾಕೇಜ್ ರೈತರು, ಕಾರ್ಮಿಕರು ಹಾಗೂ ತೊಂದರೆಯಲ್ಲಿದ್ದವರಿಗೆ ಸಹಾಯಹಸ್ತ ನೀಡಿದಂತಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಬಣ್ಣಿಸಿದ್ದಾರೆ.
ಮುಖ್ಯಮಂತ್ರಿಗಳು ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಪ್ರಧಾನಿಗಳು ಪ್ಯಾಕೇಜ್ ಘೋಷಿಸಿರುವುದರಿಂದ ದೇಶದ ಜನತೆಗೆ ಎರಡು ರೀತಿಯಿಂದ ಲಾಭವಾಗಲಿದೆ. ದೇಶದ ಇತಿಹಾಸದಲ್ಲಿಯೇ ಇದು ಅತೀ ಹೆಚ್ಚಿನ ಮೊತ್ತದ ಪ್ಯಾಕೇಜ್ ಇದಾಗಿದ್ದು. ಇದು ದೇಶದ ಜಿಡಿಪಿಯ ಶೇ ೧೦ರಷ್ಟು ಮೊತ್ತ ಹೊಂದಿದೆ.
ಇದರಿಂದ ದೇಶದ ಎಲ್ಲ ವರ್ಗದವರಿಗೆ ಲಾಭವಾಗಲಿದೆ. ಪ್ರಧಾನಿಗಳು ಕರೆ ನೀಡಿರುವ ಸ್ವದೇಶಿ ಮಂತ್ರಕ್ಕೆ ಎಲ್ಲರೂ ಕೈಜೋಡಿಸಿ ದೇಶವನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.